ಬಾಳಿನ ಬೆಳಕುಕೂತಲ್ಲಿoದಲೇ ಪ್ರಪಂಚವನ್ನು ತಿಳಿಯಬೇಕೆಂದು ನಾವು ಬಯಸಿದರೆ, ಅದಕ್ಕೆ ಪುಸ್ತಕಗಳೇ ಪರಿಹಾರ ! ಎಂತಹ ಅದ್ಭುತ ವಿಷಯವನ್ನು ಕೂಡಾ ಇದರಿಂದ ತಿಳಿಯಬಹುದು. ಏಕಾಂತದಲ್ಲಿ ಒಳ್ಳೆಯ ಪುಸ್ತಕಗಳೇ ನಮ್ಮ ಜೊತೆಗಾರರು. ಉತ್ತಮವಾದ ಪುಸ್ತಕಗಳನ್ನು ಓದುವುದರಿಂದ ನಮ್ಮ ಜ್ಞಾನವು ವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ. ಈ ಜ್ಞಾನವೆಂಬುದು ಜ್ಯೋತಿಯಂತೆ. ಬದುಕಿನ ಕತ್ತಲನ್ನು ಹೋಗಲಾಡಿಸುತ್ತದೆ. ಕಠೋಪನಿಷತ್ ನಲ್ಲಿ ಜ್ಞಾನದ ಮಹತ್ವ ಎಷ್ಟೆಂಬುದು ನಮಗೆ ಅರಿವಾಗುತ್ತದೆ.*ಕಠೋಪನಿಷತ್* *ನಲ್ಲಿ ನಚಿಕೇತನು ಯಮನಲ್ಲಿ ಜ್ಞಾನ ಕರುಣಿಸೆಂದು ಬೇಡಿಕೊಂಡಾಗ, ಯಮನು ತಕ್ಷಣವೇ ಜ್ಞಾನವನ್ನು ಆತನಿಗೆ* *ಕರುಣಿಸದೇ, ಭೂಮoಡಲದ ಸಂಪತ್ತುವಿನ ಆಸೆ ತೋರಿಸುತ್ತಾನೆ. ಇದೆಲ್ಲ ಶಾಶ್ವತವಾದ ಆನಂದವಲ್ಲವೆಂದು* *ತಿಳಿದ ನಚಿಕೇತನು ತನಗೆ ಜ್ಞಾನವೇ ಬೇಕೆಂದು ಪಟ್ಟು ಹಿಡಿಯುತ್ತಾನೆ. ಸಂತಸಗೊಂಡ ಯಮನು ಆತನಿಗೆ ಪರಮಶ್ರೇಷ್ಠ ಜ್ಞಾನವನ್ನು ಕರುಣಿಸುತ್ತಾನೆ !*ಹಾಗಾಗಿ ಜ್ಞಾನವೆಂಬುದು ಎಲ್ಲ ಸಂಪತ್ತುವಿಗಿಂತಲೂ ಮಿಗಿಲು. ನಾವು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಜ್ಞಾನವೇ ಅತ್ಯಗತ್ಯವಾದ ಸಾಧನವಾಗಿರುವುದರಿಂದ ಉತ್ತಮವಾದ ಪುಸ್ತಕಗಳನ್ನು ಓದಲೇಬೇಕು. ಆಸಕ್ತಿ ಬೆಳೆಯುತ ಹೋದಂತೆ ಅದರದೇ ಆದ ಲೋಕಕ್ಕೆ ಆ ಪುಸ್ತಕವು ನಮ್ಮನ್ನು ಕರೆದೊಯ್ಯುತ್ತದೆ. ಎಲ್ಲಕ್ಕಿಂತ ಮಿಗಿಲಾದ ಆತ್ಮತೃಪ್ತಿಯು ಲಭಿಸುತ್ತದೆ. ಪುಸ್ತಕದ ಜೊತೆ ಗೆಳೆತನ ಹೆಚ್ಚುತ್ತಾ ಹೋದಂತೆ ಓದುಗನು ಉತ್ತಮ ಬರಹಗಾರ ಆಗಬಹುದು. *”ಒಬ್ಬ ಉತ್ತಮ ಓದುಗಾರ ಮಾತ್ರ, ಒಬ್ಬ ಉತ್ತಮ ಬರಹಗಾರನಾಗಲು ಸಾಧ್ಯ “* ಎಂಬ ಮಾತನ್ನು ಇಲ್ಲಿ ಅರಿಯಬೇಕು. ಉತ್ತಮ ಪುಸ್ತಕಗಳನ್ನು ಓದುವುದರಿಂದ ಆಗುವ ಪ್ರಯೋಜನ ಕಡಿಮೆಯಂತೂ ಅಲ್ಲ. ವಿಜ್ಞಾನದ ಪ್ರಕಾರ ಪುಸ್ತಕಗಳನ್ನು ಓದುವುದರಿಂದ ಮೆದುಳು ಚುರುಕಾಗಿ, ಮನಕೆ ನವ ಉಲ್ಲಾಸ ಲಭಿಸುತ್ತದೆ. ಹೊಸ ಹೊಸ ವಿಚಾರಗಳು ನಮ್ಮಲ್ಲಿ ಉದ್ಭವಿಸುತ್ತದೆ. ಅಗತ್ಯ ಜ್ಞಾನವು ಕೂಡಾ ಲಭಿಸುವುದರಿಂದ ನಮ್ಮ ಮನವು ಗೊಂದಲಕ್ಕೆ ಸಿಲುಕುವ ಸಂಧರ್ಭಗಳೂ ಕೂಡಾ ಅತ್ಯಂತ ಕಡಿಮೆ ಇರುತ್ತದೆ. ಹಲವಾರು ಪ್ರಯೋಜನವನ್ನು ಇದು ನೀಡುವುದರಿಂದ ನಾವು ಉತ್ತಮ ಪುಸ್ತಕಗಳನ್ನು ಓದಲೇಬೇಕು. ಈ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ನಿಜವಾಗಿಯೂ ಹೇಳಬೇಕೆಂದರೆ ಈ ಪುಸ್ತಕಗಳೇ *ಬಾಳಿನ ಬೆಳಕು…* !

Advertisement

ಬರಹ: ರಂಜನ್ ಸಾಧಿತ್
*ವಿದ್ಯಾರ್ಥಿ*
*ಪಾಡ್ಲ, ಕಡಬ*

Advertisement
web