ಕ್ರೀಡಾ ಪತ್ರಕರ್ತ ಹಾಗೂ ಕ್ರಿಕೆಟ್ ಕಾಮೆಂಟೇಟರ್ ಕಿಶೋರ್ ಭಿಮಾನಿ ಅನಾರೋಗ್ಯದಿಂದ ಬಳಲುತಿದ್ದು ಗುರುವಾರ ನಿಧನರಾದರು ಎಂದು ವರದಿಯಾಗಿದೆ.

Advertisement

ಅವರ ಕಳೆದ ತಿಂಗಳಿನಿಂದ ಕೋವಿಡ್ ವೈರಸ್‌ಗೆ ತುತ್ತಾಗಿದ್ದು, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ನಂತರ ಚಿಕಿತ್ಸೆಗೆ ಒಳಪಟ್ಟಿದ್ದರು. ಆದರೆ ಅವರಿಗೆ ಕೊರೊನಾ ವೈಸರ್‌ನ ಲಕ್ಷಣಗಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ, ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮೂರು ದಶಕಗಳಿಗೂ ಅಧಿಕ ಕಾಲ ಅವರು ಕ್ರಿಕೆಟ್ ಕಾಮೆಂಟರಿ ಹಾಗೂ ಪತ್ರಕರ್ತರಾಗಿ ಕಿಶೋರ್ ಹೆಸರನ್ನು ಗಳಿಸಿದರು. 1886ರಲ್ಲಿ ಚೆಪಾಕ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಐತಿಹಾಸಿಕ ಟೆಸ್ಟ್ ಟೈ ಪಂದ್ಯದ ವೀಕ್ಷಕ ವಿವರಣೆ ಮೂಲಕ ಕಿಶೋರ್ ಭಿಮಾನಿ ಜನಮನ ಗೆದ್ದರು. ಕ್ರಿಕೆಟ್‌ನ ಎನ್‌ಸೈಕ್ಲೋಪೀಡಿಯಾ ಎಂದೇ ಖ್ಯಾತರಾಗಿದ್ದ ದಿಗ್ಗಜ ಕ್ರಿಕೆಟ್ ಕಾಮೆಂಟೇಟರ್ ಕಿಶೋರ್.

ಮೂರು ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಕಾಮೆಂಟೇಟರ್ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಕಿಶೋರ್ ಅವರಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿದೆ. ಹಾಗೆಯೇ 2012ರಲ್ಲಿ ಪ್ರತಿಷ್ಠಿತ ಹೆಚ್& ಜಿ ಕ್ಲಿನಿಕ್ ಜರ್ನಲಿಸಂ ಪ್ರಶಸ್ತಿ, ಅವರು ಪತ್ರಿಕೋದ್ಯಮ ಹಾಗೂ ಕ್ರಿಕೆಟ್ ಕಾಮೆಂಟರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ “ಜೀವಮಾನ ” ಎನ್ನುವ ಸಾಧನೆ ಪ್ರಶಸ್ತಿಯನ್ನು ಕೂಡ ತನ್ನ ಮುಡಿಗೇರಿಸಿಕೊಂಡಿದ್ದಾರೆ..

Advertisement
web