ಡೆಹ್ರಾಡೂನ್/ಉತ್ತರಾಖಂಡ: ಉತ್ತರಾಖಂಡ ರಾಜ್ಯಪಾಲೆ ಬೇಬಿ ರಾಣಿ ಮೌರ್ಯರವರಿಗೆ ಕೊರೊನ ಸೋಂಕು ತಗುಲಿದೆ. ಇದನ್ನು ಸ್ವತಃ ರಾಜ್ಯಪಾಲೆ ಟ್ವೀಟ್ ಮೂಲಕ ತಿಳಿಸಿದ್ದಾರೆ.

Advertisement

ಟ್ವೀಟ್ ಮಾಡಿರುವ ರಾಜ್ಯಪಾಲೆ, ”ನನ್ನ ಕರೋನಾ ಪರೀಕ್ಷಾ ವರದಿ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ. ನನ್ನಲ್ಲಿ ಸೋಂಕಿನ ಲಕ್ಷಣ ಕಂಡುಬಂದಿಲ್ಲ ಮತ್ತು ಯಾವುದೇ ಸಮಸ್ಯೆ ಇಲ್ಲ. ವೈದ್ಯರ ಮೇಲ್ವಿಚಾರಣೆಯಲ್ಲಿ ನಾನು ಪ್ರತ್ಯೇಕಳಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ನಿಕಟ ಸಂಪರ್ಕಕ್ಕೆ ಬಂದವರು, ದಯವಿಟ್ಟು ಜಾಗರೂಕರಾಗಿರಿ ಮತ್ತು ಪರೀಕ್ಷಿಸಿ.” ಎಂದು ಮನವಿ ಮಾಡಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್,” ರಾಜ್ಯಪಾಲರು ಶೀಘ್ರವಾಗಿ ಗುಣಮುಖರಾಗಬೇಕೆಂದು ಭಗವಾನ್ ಬದ್ರಿ ವಿಶಾಲ್ ಮತ್ತು ಬಾಬಾ ಕೇದಾರರಿಗೆ ಪ್ರಾರ್ಥಿಸುತ್ತೇನೆ.” ಎಂದು ಪ್ರತಿಕ್ರಿಯಿಸಿದ್ದಾರೆ

 

 

Advertisement
web