ಇದೀಗಾಗಲೇ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಬಿರುಸಿನ ಸಿದ್ಧತೆ ನಡೆಯುತ್ತಿದೆ.ಈ ಮಧ್ಯೆ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ತೆರಿಗೆ ವಂಚನೆ ಆರೋಪವನ್ನು ಹೊರಿಸಲಾಗಿದೆ.ಈ ಬಗ್ಗೆ ಅಮೆರಿಕಾದ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಸುದೀರ್ಘ ವರದಿ ಪ್ರಕಟಿಸಿದೆ.ಟ್ರಂಪ್ ಕೇವಲ 750 ಡಾಲರ್ ತೆರಿಗೆ ಪಾವತಿಸಿದ್ದು, ಇದು 2016ರಲ್ಲಿ ಪಾವತಿಸಿದ್ದು ಆ ಬಳಿಕ ಯಾವುದೇ ತೆರಿಗೆ ಪಾವತಿಸಿಲ್ಲ ಎಂದು ಹೇಳಿದೆ.

Advertisement

ಇದಕೆ ಪ್ರತಿಕ್ರಿಯಿಸಿರುವ ಟ್ರಂಪ್ ಈ ಎಲ್ಲ ಆರೋಪಗಳನ್ನು ನಿರಾಕರಿಸಿ ಇದು ಸುಳ್ಳು ವರದಿಯೆಂದು ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ ಅಮೆರಿಕಾದ ಕಾನೂನಿನ ಪ್ರಕಾರ ಅಮೆರಿಕಾದ ಅಧ್ಯಕ್ಷರು ತಮ್ಮ ತೆರಿಗೆಯ ಪಾವತಿಯ ವಿಷಯವನ್ನು ಬಹಿರಂಗ ಪಡಿಸುವ ಅಗತ್ಯ ಇಲ್ಲ .ಆದರೂ ಪಾರದರ್ಶಕತೆ ಮೆರೆಯಲು ಹಲವು ಅಧ್ಯಕ್ಷರು ತೆರಿಗೆಗೆ ಸಂಬಂದಿಸಿದ ಮಾಹಿತಿ ಬಹಿರಂಗಪಡಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯ ಜೊತೆಗಿನ ಸಾರ್ವಜನಿಕ ಸಂವಾದಕ್ಕೆ ದಿನಗಳು ಬಾಕಿ ಇರುವಂತೆಯೇ ಡೊನಾಲ್ಡ್ ಟ್ರಂಪ್ ಕುರಿತ ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ.
Advertisement:
sharanya
jyo
durga
bharath

Advertisement
web