ವಾಷಿಂಗ್ಟನ್ ಡಿಸಿ::ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ ಕೊರೋನಾ ರುದ್ರನರ್ತನ ಮಿತಿಮೀರಿದೆ.ಇದೀಗ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಜೆ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾಗೆ ಗುರುವಾರ ಸಂಜೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.ಸ್ವತ: ಟ್ರಂಪ್ ಅವರೇ ಈ ವಿಷಯ ಟ್ವಿಟರ್ ಮೂಲಕ ತಿಳಿಸಿದರು.74 ವರ್ಷದ ಡೋನಾಲ್ಡ್ ಜೆ ಟ್ರಂಪ್ ಸೆಪ್ಟೆಂಬರ್ 28ರಂದು ವೈಟ್ ಹೌಸ್‍ನಲ್ಲಿ ನಡೆದ ದೇಶದ ಕೊರೊನಾ ಸ್ಥಿತಿಗತಿ ಕುರಿತಾಗಿ ಚರ್ಚೆಯಲ್ಲಿ ವೈಟ್‍ಹೌಸ್‍ನ ಡೆಮೋಕ್ರಾಟಿಕ್ ಪ್ರೆಸಿಡೆನ್ಶಿಯಲ್ ನಾಮಿನಿಯಾಗಿರುವ ಜಾಯ್ ಬೈಡನ್ ಇವರೊಂದಿಗೆ ಪಾಲ್ಗೊಂಡಿದ್ದು,ಇದೀಗ 77 ವರ್ಷದ ಜಾಯ್ ಅವರಿಗೂ ಕೋರೋನಾ ಪಾಸಿಟಿವ್ ದೃಢಪಟ್ಟಿದೆ.
ಟ್ರಂಪ್‍ರವರಿಗೆ ಅವರ ಮನೆಯಲ್ಲೇ ವೈಟ್ ಹೌಸ್ ವೈದ್ಯಕೀಯ ತಂಡ ಚೆಕಿತ್ಸೆ ನೀಡುತ್ತಿದ್ದು,ಅರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮಾಧ್ಯಮಗಳಿಗೆ ಮೂಲಗಳಿಂದ ತಿಳಿದುಬಂದಿದೆ.
ಸ್ವತ: ಅಧ್ಯಕ್ಷ ಟ್ರಂಪ್ ಹಲವಾರು ಬಾರಿ ತಾವೇ ಮಾಸ್ಕ್ ಧರಿಸದೇ ಕಾರ್ಯಕ್ರಮಗಳಿಗೆ ಹಾಜರಾಗುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‍ಗೆ ಗುರಿಯಾಗಿದ್ದರು.ಅಮೇರಿಕಾದಲ್ಲಿ ಸುಮಾರು 74 ಲಕ್ಷ ಮಂದಿಗೆ ಕೋರೋನಾ ಪಾಸಿಟಿವ್ ದೃಢಪಟ್ಟಿದ್ದು,2 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
Advertisement:
sharanya
jyo
bharath

Advertisement
Advertisement
web