ಇಂದು ಇಡೀ ಜಗತ್ತು ಭಾರತದ ಮೇಲೆ ಭವ್ಯ ಭರವಸೆಯನ್ನಿಟ್ಟಿದೆ. ಭಾರತದ ನಾಯಕತ್ವ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಅಕ್ರಮವಾಗಿ ಭಾರತದ ಮೇಲೆ ಗೂಢಾಚಾರಿಕೆ ಮಾಡುವವರ ಎದೆಯಲ್ಲಿ ನಡುಕ ಹುಟ್ಟುವಂತಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದವನ್ನು ಪ್ರತಿನಿಧಿಸಿದ ಎಲ್ಲರ ಅಚ್ಚುಮೆಚ್ಚಿನ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರಿಗೆ ಇಂದು ವರ್ಷವರ್ಧಕದ ಸಂಭ್ರಮ.

Advertisement

ಹೌದು ಚೌಕಿದಾರನಾಗಿ ಪ್ರಜೆಗಳ ರಕ್ಷಣೆಯಲ್ಲಿ ಪ್ರಧಾನ ಸೇವಕನಾಗಿ ಭಾರತಾಂಬೆಯ ಸೇವೆಯೇ ಪರಮ ಗುರಿ ಎಂದು ದಣಿವೇ ಇಲ್ಲದೆ ಸೇವೆ ನೀಡುತ್ತಿರುವ ಪ್ರಧಾನಿಗೆ ಇಂದಿಗೆ 70 ನೇ ವರ್ಷದ ಜನ್ಮದಿನ.

ಇವರು ಸೆಪ್ಟಂಬರ್ 17, 1950 ರಂದು ಗುಜರಾತ್‍ನ ವಾಡ್ನಾಗರ್ ನಲ್ಲಿ ದಾಮೋದರ್‍ದಾಸ್ ಮುಲ್ಚಂದ್ ಮತ್ತು ಹಿರಾಬೆನ್ ಮೋದಿ ದಂಪತಿಗಳಿಗೆ ಮೂರನೇ ಪುತ್ರನಾಗಿ ಜನಿಸಿದ್ದರು.

ಬಾಲ್ಯದಲ್ಲಿ ವಾಡ್ನಾಗರ್ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ತಂದೆಗೆ ಸಹಾಯ ಮಾಡುತ್ತಿದ್ದ ನರೇಂದ್ರ ಮೋದಿ ನಂತರ ಸಹೋದರನೊಂದಿಗೆ ಬಸ್ ಟರ್ಮಿನಸ್ ಬಳಿ ಸ್ವಂತ ಚಹಾದ ಅಂಗಡಿ ನಡೆಸುತ್ತಿದ್ದರು. ಎಂಟನೇ ವಯಸ್ಸಿಗೇ ಆರ್ ಎಸ್‍ಎಸ್ ನೊಂದಿಗೆ ಸೇರಿ ಸಂಘದೊಂದಿಗೆ ಸುದೀರ್ಘವಾಗಿ ಬೆರೆತಿದ್ದರು.

ನಂತರದ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆಯೊಂದಿಗೆ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಗುಜರಾತ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಎಂಎ ಪದವಿ ಪಡೆದಿದ್ದ ಮೋದಿಗೆ ರಾಜಕೀಯದ ಬಗೆಗೆ ಒಲವು ಹೆಚ್ಚಾಗಿಯೆ ಇತ್ತು.

1987ರಲ್ಲಿ ಸೂರತ್ ಮತ್ತು ವಡೋದರಾ ಪ್ರದೇಶಗಳ ಆರ್‍ಎಸ್‍ಎಸ್ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ವಹಿಸಿಕೊಂಡು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದ ಮೋದಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಚುನಾಯಿತರಾಗಿ ಕೆಲಸ ನಿರ್ವಹಿಸಿದರು. ಅವರ ಕಾರ್ಯತಂತ್ರಗಳಿಗೆ ಮೆಚ್ಚಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು.

2001 ರಲ್ಲಿ ಗುಜರಾತ್ ನ ಮುಖ್ಯ ಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ತಮ್ಮ ಆಡಳಿತಾತ್ಮಕ ನಿರ್ಧಾರಗಳಿಂದ ಗುಜರಾತ್‍ನ ಆರ್ಥಿಕ ಅಭಿವೃಧ್ದಿಗೆ ಶ್ರಮಿಸಿ ಜನ ನಾಯಕರಾದರು. ವಿಶೇಷ ವಾಕ್ಚಾತುರ್ಯ ಹಾಗೂ ಹೊಸ ಯೋಜನೆಗಳ ಅನುಷ್ಠಾನದ ಮೂಲಕ ಗುಜರಾತ್‍ನ ಅಭೂತಪೂರ್ವ ಬದಲಾವಣೆಗೆ ಕಾರಣೀಭೂತರಾದರು. ಗುಜರಾತ್‍ನ ಪ್ರತಿ ಹಳ್ಳಿಗೆ ವಿದ್ಯುತ್ ನೀಡುವ ಮುಖಾಂತರ ಕತ್ತಲ ಬದುಕಿಗೆ ಬೆಳಕಾಗಿ 2014 ರವರೆಗೆ ಮುಖ್ಯಮಂತ್ರಿಯಾಗಿ ಅತೀ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2014 ರಲ್ಲಿ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿ ಭಾರತೀಯ ಜನತಾ ಪಕ್ಷದ ಗೆಲುವನ್ನು ಎತ್ತಿಹಿಡಿದು ಭಾರತದ ಪ್ರಧಾನಿಯಾದರು. “ ಸಬ್ಕಾ ಸಾಥ್, ಸಬ್ಕಾ ವಿಕಾಸ್” ಎನ್ನುವ ಧ್ಯೇಯ ವಾಕ್ಯದೊಂದಿಗೆ ಆಡಳಿತದಲ್ಲಿ ಮಾದರಿ ಬದಲಾವಣೆಯನ್ನು ತಂದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಪ್ರಮುಖ ಅಂತರಾಷ್ಟ್ರೀಯ ಸಂಸ್ಥೆಗಳು ನರೇಂದ್ರ ಮೋದಿಯವರ ಆಡಳಿತದಿಂದ ಭಾರತ ಅತೀ ವೇಗವಾಗಿ ಬಡತನ ಮುಕ್ತವಾಗುತ್ತಿದೆ ಎಂದು ವರದಿ ಮಾಡಿದೆ ಈ ಮೂಲಕ ದೇಶದ ಜನರ ಏಳಿಗಾಗಿ ಸರ್ವಸ್ವವನ್ನೂ ಸಮರ್ಪಿಸಿದ ನಾಯಕ ಮೋದಿ ಎನ್ನಬಹುದು. ದೇಶದ ಜನರ ಹಿತ ದೃಷ್ಟಿಯಿಂದ ಜಾರಿಗೊಳಿಸಿದ ನೂರಾರು ಯೋಜನೆಗಳಿಂದ ಭಾರತೀಯರು ಇಂದು ನಿಟ್ಟುಸಿರು ಬಿಟ್ಟು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಅವುಗಳಲ್ಲಿ ಮುಖ್ಯವಾಗಿ ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್‍ಧನ್ ಯೋಜನಾ, ಪ್ರಧಾನ ಮಂತ್ರಿ ಉಜ್ವಲಾ ಯೋಜನಾ , ಪಿಎಂ ಕಿಸಾನ್ ಸಮ್ಮಾನ್ ಯೋಜನಾ, ಸೇರಿದಂತೆ ಇನ್ನು ಹಲವು ಯೋಜನೆಗಳಿವೆ.

ಭಾರತವನ್ನು ಅಂತರಾಷ್ಟ್ರೀಯ ಉತ್ಪದನಾ ಶಕ್ತಿಯನ್ನಾಗಿಸಲು ಜಾರಿಗೆ ತಂದ ಮೇಕ್ ಇನ್ ಇಂಡಿಯಾ ಯೋಜನೆ ದೇಶದ ಪರಿವರ್ತಕ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ ಸ್ವಚ್ಚತೆಯೇ ಆರೋಗ್ಯ ಎಂದು ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಸ್ವಚ್ಚಭಾರತ್ ಅಭಿಯಾನವನ್ನು ಜಾರಿಗೊಳಿಸಿ ವಿಶ್ವಸಂಸಂಸ್ಥೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾರತದ ಇತಿಹಾಸ, ಸಂಸ್ಕೃತಿಯ ಬಗೆಗೆ ವಿಶೇಷ ಗೌರವ ಹೊಂದಿರುವ ಮೋದಿಯವರು ಸರ್ದಾರ್ ವಲ್ಲಭ ಬಾಯ್ ಪಟೇಲ್ ಅಂತಹ ಶ್ರೇಷ್ಟ ನಾಯಕರ ವಿಶ್ವದ ಅತೀ ದೊಡ್ಡ ಪ್ರತಿಮೆ ಸ್ಟೇಟ್ ಆಪ್ ಯುನಿಟಿ ಗೆ ಭಾರತ ನೆಲೆಯಾಗುವ ಅವಕಾಶ ಕಲ್ಪಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ ವಾಕ್ಚಾತುರ್ಯದ ಮೂಲಕ ಮಾತನಾಡಿ ವಿಶ್ವದೆಲ್ಲೆಡೆ ಮನೆಮಾತಾದ ಇವರು 17 ವರ್ಷಗಳ ಸುದೀರ್ಘ ಅವಧಿಯ ಬಳಿಕ ನೇಪಾಳಕ್ಕೆ, 28 ವರ್ಷಗಳ ಬಳಿಕ ಆಸ್ಟ್ರೇಲಿಯಾಕ್ಕೆ, 31 ವರ್ಷಗಳ ಬಳಿಕ ಯುಎಇ ಗೆ ದ್ವಿಪಕ್ಷೀಯ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,

ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಪ್ರಧಾನಿ ಜೂನ್ 21 ರಂದು ಯೋಗದಿನಾಚರಣೆ ಎಂದು ಘೋಷಣೆ ಮಾಡಿದರು. ದೇಶದಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ವಿಶ್ವ ವಿವಿಧ ರಾಷ್ಟ್ರಗಳೂ ಇದನ್ನು ಆಚರಣೆಗೆ ತಂದುಕೊಂಡಿವೆ. ಕಪ್ಪು ಹಣದ ಅವ್ಯವಹಾರ ತಡೆಗೆ ಒಂದು ಸಾವಿರ ಮತ್ತು ಐನೂರರ ನೋಟು ರದ್ದತಿಯಿಂದ ಹಿಡಿದು ಕಾಶ್ಮೀರದ ಪೌರತ್ವ ತಿದ್ದುಪಡಿಯವರಗೂ ಹಾಗೂ ಶತಮಾನತಳಿಂದ ವ್ಯಾಜ್ಯದಲ್ಲಿದ್ದ ರಾಮಜನ್ಮ ಭೂಮಿಯಲ್ಲಿ ಮತ್ತೆ ರಾಮಮಂದಿರ ನಿರ್ಮಾಣ ಮಾಡುವ ಕಾರ್ಯಕ್ಕೆ ಅಡಿಗಲ್ಲು ಹಾಕುವ ಕೆಲಸದವರೆಗೂ ಮೋದಿಯವರ ಕಾರ್ಯ ಅಗಮ್ಯ.
ಪ್ರಸ್ತುತ ವಿಶ್ವದಾದ್ಯಂತ ಸಾಂಕ್ರಾಮಿಕ ರೋಗದಿಂದ ಕಷ್ಟ ಅನುಭವಿಸುತ್ತಿದ್ದಾರೆ.‌ಇಂತಹ ಸಂದರ್ಭದಲ್ಲಿ ದೇಶವನ್ನು ಲಾಕ್ ಡೌನ್ ಮಾಡಿ ಸಮರ್ಥವಾಗಿ ಆಡಳಿತ ನಡೆಸಿ ಭಾರತೀಯರ ಎದೆಯಲ್ಲಿ ಧೈರ್ಯ ತುಂಬಿದ ಮಾನನೀಯ ವ್ಯಕ್ತಿತ್ವ ಮೋದಿ ಅವರದ್ದು.

ದೇಶಕ್ಕಾಗಿ ಹೋರಾಡುವ ಸೈನಿಕರ ಎದೆಯಲ್ಲಿ ಧೈರ್ಯತುಂಬುವ ಚೇತನಾ ಶಕ್ತಿಯಾಗಿ, ಇಡೀ ದೇಶದ ಜನತೆಗೆ ಚೌಕಿದಾರನಾಗಿ ಭಾರತಮಾತೆಯ ಸೇವೆಗೆ ಸದಾ ಸಿದ್ದ ಎನ್ನುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ನಮ್ಮ ತಂಡದ ಕಡೆಯಿಂದ ಜನ್ಮ ದಿನದ ಶುಭಾಷಯಗಳು.

News credit: Pavitra Bhat
sharanya
durga

Advertisement
web