ಆ ಮೊಗದ ಲಜ್ಜೆಯೇ ನಿನ್ನ ಶೃಂಗಾರ..
ಸೌಂದರ್ಯವ ಕಲೆಹಾಕುವ ನಾನೊಬ್ಬ ಸಾಮಾನ್ಯ ಕಲೆಗಾರ

Advertisement

ನೋವ ಮರೆಮಾಚೋ ನಗು ನಿನ್ನದು..
ಅರಳುವ ಹೂನಗೆ ಬೀರುವ ಕುಂಚ ನನ್ನದು

ನಿನ್ನ ಅಂದಕೆ ಇಲ್ಲ ಸರಿಸಾಟಿ..
ಹೂಗಳ ಗೊಂಚಲಿಗೂ ನೀಡುತಿರುವೆ ಪೈಪೋಟಿ

ಎಂದಿಗೂ ಮಾಸದಿರಲಿ ತುಟಿಯಂಚಿನ ಆ ಕಿರುನಗೆ..
ಸ್ಫೂರ್ತಿದಾಯಕವಾಗಲಿ ಅಗಣಿತ ಕಲಾವಿದರಿಗೆ..!!ಬರಹ:ಪ್ರಥ್ವಿ ಪುತ್ತೂರು

Advertisement
web