ಭಾರತದಿಂದ ತಲೆಮರಿಸಿಕೊಂಡಿರುವ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಇದೀಗ ತನ್ನ ದೇಶ ‘ಕೈಲಾಸ’ಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದಾನೆ.

Advertisement

ತನ್ನನ್ನು ಭೇಟಿ ಮಾಡಲು ಇಚ್ಛಿಸುವ ಭಕ್ತರು 3 ದಿನಗಳ ವೀಸಾ ಪಡೆದು ತಮ್ಮ ಸ್ವಂತ ಖರ್ಚಿನಲ್ಲಿ ಇಲ್ಲಿಗೆ ಬಂದು ತನ್ನನ್ನು ಭೇಟಿ ಮಾಡಬಹುದು ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ನಿತ್ಯಾನಂದ ತಮ್ಮ ವೆಬ್ ಸೈಟ್ ನಲ್ಲಿ ಈ ಸಂದೇಶ ರವಾನಿಸಿದ್ದು, ಆಸ್ಟ್ರೇಲಿಯಾಗೆ ಹೋಗಬೇಕು. ಅಲ್ಲಿಂದ ಗರುಡ ಚಾರ್ಟೆಡ್ ವಿಮಾನದ ಮೂಲಕ ಕೈಲಾಸಕ್ಕೆ ಕರೆದೊಯ್ಯಲಾಗುವುದು. 3 ದಿನಕ್ಕಿಂತ ಹೆಚ್ಚು ಇಲ್ಲಿ ಇರಲು ಅವಕಾಶವಿಲ್ಲ, ಆದರೆ ಹೆಚ್ಚು ದಿನಗಳ ಇರಲು ಇಚ್ಛಿಸುವ ಭಕ್ತರು ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ನಿತ್ಯಾನಂದ ವೀಡಿಯೋ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾನೆ.

ವೀಸಾಗೆ ಅರ್ಜಿ ಸಲ್ಲಿಸಲು shrikailasa.org.e-passport ಈ ಲಿಂಕ್ ನೋಡಲು ಸಲಹೆ ನೀಡಿದ್ದಾನೆ. ಭೇಟಿ ನೀಡುವ ಭಕ್ತರಿಗೆ ಊಟ, ವಸತಿ ಉಚಿತ ವ್ಯವಸ್ಥೆ ಮಾಡಲಾಗುವುದು ಎಂದು  ವಿವರಿಸಿದ್ದಾನೆ.

ಭಾರತದಿಂದ ತಲೆಮರಿಸಿಕೊಂಡಿರುವ ನಿತ್ಯಾನಂದ ದಕ್ಷಿಣ ಅಮೇರಿಕಾದ ಸಮೀಪ ಒಂದು ದ್ವೀಪವನ್ನು ಖರೀದಿಸಿ ತನ್ನ ಸ್ವಂತ ದೇಶ ಕೈಲಾಸ ನಿರ್ಮಿಸಿರುವುದಾಗಿ ಘೋಷಿಸಿದ್ದಾನೆ. ರಾಷ್ಟ್ರದ ಧ್ವಜ, ಲಾಂಚನ, ರಿಸರ್ವ್ ಬ್ಯಾಂಕ್ ಅನ್ನು ರಚಿಸಿದ್ದಾನೆ. ಅಷ್ಟೇ ಅಲ್ಲದೆ ತನ್ನ ದೇಶಕ್ಕೆ ಮಾನ್ಯತೆ ನೀಡುವಂತೆ ವಿಶ್ವ ಸಂಸ್ಥೆಗೆ ಪತ್ರದ ಮೂಲಕ ಮನವಿಯನ್ನು ಮಾಡಿದ್ದಾನೆ.

Advertisement
web