ಮಂಗಳೂರು: ಕೋವಿಡ್ 19 ನಿಂದಾಗಿ ಎಷ್ಟೋ ಅನಾಹುತಗಳಾದರೂ ಪ್ರತಿಭೆಗಳಿಗಂತು ಇದೂ ತುಂಬಾನೆ ಒಳಿತುಗಳೇ ಆಗಿದೆ ಅನ್ನುವುದಕ್ಕೆ ಕಡಬ ತಾಲೂಕಿನ ಸಮ್ಯಕ್ತ್ ಜೈನ್ ಅವರು ಸಾಕ್ಷಿ ಅಂತಾನೆ ಹೇಳಬಹುದು.
ಇದುವರೆಗೆ ಮೂರು ಕವನಸಂಕಲನವನ್ನು ಬರೆದು – ಪ್ರಕಟಗೊಳಿಸಿ , ಸಾಹಿತ್ಯಿಕ ಚಟುವಟಿಕೆಯಲ್ಲಿ ತಲ್ಲೀನರಾಗಿರುವ *ಸಮ್ಯಕ್ತ್ .ಜೈನ್* ರವರಿಗೆ ಇದೀಗ ಮತ್ತೊಂದು ಸಾಧನೆಯ ಗರಿ ಸೇರ್ಪಡೆಗೊಂಡಿದೆ.ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಇತ್ತೀಚೆಗೆ , *ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕೃತಿಗಳ ಪರಿಚಯ ಸ್ಪರ್ಧೆ 2020* ಯನ್ನು ಆಯೋಜಿಸಿತ್ತು . ಇದರಲ್ಲಿ ರಾಧೇಶ್ ತೋಳ್ಪಾಡಿರವರು ಬರೆದ ಮಕ್ಕಳ ಕವಿತೆಯ ಕೃತಿಯೊಂದನ್ನು ಪರಿಚಯಿಸಿದ ಇವರು , *ಪ್ರಥಮ* ಸ್ಥಾನವನ್ನು ಪಡೆದು ಸಂಸ್ಥೆಯಿಂದ ಕೊಡಲ್ಪಡುವ ಪ್ರಶಸ್ತಿ – ಪುರಸ್ಕಾರವನ್ನು ಪಡೆದಿರುತ್ತಾರೆ .
ನೂಜಿಬಾಳ್ತಿಲ , ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಮತ್ತು ಶ್ರೀಮತಿ ಮಂಜುಳಾರವರ ಸುಪುತ್ರರಾಗಿರುವ ಇವರು ಕವಿ ,ಲೇಖಕ ,ನಾಟಕ ರಚನೆಗಾರ, ಯುವ ಚಿಂತಕ,ನಿರೂಪಕ, ವಾಗ್ಮಿಯಾಗಿ ಚಿರಪರಿಚಿತಗೊಂಡಿದ್ದು , ತನ್ನ ಸಾಧನೆಯೊಂದಿಗೆ ಊರಿನ ಹೆಸರನ್ನೂ ರಾಜ್ಯ ಮಟ್ಟದಲ್ಲಿ ಮಿಂಚುವಂತೆ ಮಾಡುತ್ತಿದ್ದಾರೆ