ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಕೊರೊನಾ ಸೋಂಕು ತಗುಲಿ ವರದಿ ಪಾಸಿಟಿವ್ ಬಂದಿದೆಂದು ಇಂದು ಹೇಳಿಕೊಂಡಿದ್ದಾರೆ.

Advertisement

ಅವರಿಗೆ 63 ವರ್ಷ, ಗವರ್ನರ್ ಟ್ವಿಟ್ ಮೂಲಕ ತಿಳಿಸಿದ್ದಾರೆ. ಕೋವಿಡ್ ಪಾಸಿಟಿವ್ ವರದಿ ಬಂದಿದ್ದು ಕ್ವಾರಂಟೈನ್ ನಲ್ಲಿದ್ದು ಕೆಲಸ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಹಾಗೆಯೇ ವಿಡಿಯೋ ಕಾನ್ಫರೆನ್ಸ್ ಮತ್ತು ದೂರವಾಣಿ ಮೂಲಕ ಎಲ್ಲಾ ಉಪ ಗವರ್ನರ್‌ಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

Advertisement
web