ಭಾರತದ ಕೇಂದ್ರೀಯ ಬ್ಯಾಂಕ್ ಆದ ಆರ್.ಬಿ,ಐ ಹಣಕಾಸಿನ ವ್ಯವಹಾರ, ಇನ್ನಿತರ ಕೆಲಸಗಳಿಗೆ ಉಳಿದ ಬ್ಯಾಂಕುಗಳಿಗೆ ನಿರ್ದೇಶನ ಮಾಡುವ ಬದಲು ಸಾಮಾಜಿಕ ಜಾಲತಾಣದ ಬಳಕೆ ಮಾಡುತ್ತಾ ಕುಳಿತರೆ……

Advertisement

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹತ್ತು ಲಕ್ಷ ಫಾಲೋವರ್ಸ್ ಗಳನ್ನು ಗಳಿಸಿದೆ. ಜಾಗತಿಕ ಮಟ್ಟದಲ್ಲಿ ಯಾವುದೇ ಕೇಂದ್ರ ಬ್ಯಾಂಕ್ ಗೂ ಇಲ್ಲದಷ್ಟು ಫಾಲೋವರ್ಸ್ ಗಳು ಟ್ವಿಟ್ಟರ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಇದೆ ಎಂದು ಆರ್.ಬಿ,ಐ ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

”ಆರ್‌ಬಿಐ ಟ್ವಿಟರ್ ಖಾತೆ ಇಂದು ಫಾಲೋವರ್ಸ್ ಗಳ ಸಂಖ್ಯೆ ಒಂದು ಮಿಲಿಯನ್ ತಲುಪಿದೆ. ಇದೊಂದು ಹೊಸ ಮೈಲಿಗಲ್ಲು. ಆರ್‌ಬಿಐನ ನನ್ನ ಎಲ್ಲ ಸಹೋದ್ಯೋಗಿಗಳಿಗೆ ಅಭಿನಂದನೆಗಳು”. ಎಂದು ಆರ್.ಬಿ.ಐ ಗವರ್ನರ್ ಶಕ್ತಿಕಾಂತ ದಾಸ್ ಟ್ವೀಟ್ ಮಾಡಿದ್ದಾರೆ.

ಆರ್.ಬಿ.ಐ ಬಿಟ್ಟರೆ ಟ್ವಿಟ್ಟರ್ ನಲ್ಲಿ ಯು.ಎಸ್. ಫೆಡರಲ್ ರಿಸರ್ವ್ ಗೆ 6,77,000 ಅನುಯಾಯಿಗಳಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಗೆ 5.9 ಲಕ್ಷ ಫಾಲೋವರ್ಸ್, ಬ್ರೆಜಿಲ್ ಕೇಂದ್ರ ಬ್ಯಾಂಕ್ 3.8 ಲಕ್ಷ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್ ಗೆ 3.17ಲಕ್ಷ ಫಾಲೋವರ್ಸ್ ಇದ್ದಾರೆ.

ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Advertisement
web