ಶ್ರೀನಗರ: ಜಮ್ಮು-ಕಾಶ್ಮೀರದ ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫಿಗೆ ಮೇಲಿಂದ ಮೇಲೆ ಶಾಕ್ ಉಂಟಾಗುತ್ತಲೇ ಸಾಗಿದೆ.

Advertisement

ಪಿಡಿಪಿಯ ಮೂವರು ಸಂಸ್ಥಾಪಕ ಸದಸ್ಯರಾಗಿರುವ,
ರಾಜ್ಯಸಭೆಯ ಮಾಜಿ ಸಂಸದ ಟಿ.ಎಸ್. ಬಜ್ಞಾ, ಹಿರಿಯ ನಾಯಕರಾದ ಟಿ ಎಸ್ ಬಜ್ಞಾ, ಹಸನ್ ಅಲಿ ವಾಫಾ, ಮತ್ತು ಬೆಡ್ ಮಹಾಜನ್ ಅವರು ಅಕ್ಟೋಬರ್ 26 ರಂದು ಪಿಡಿಪಿಗೆ ರಾಜೀನಾಮೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸುವವರೆಗೆ ತ್ರಿವರ್ಣವನ್ನು ಹಿಡಿಯದಿರುವ ಬಗ್ಗೆ ಮೆಹಬೂಬಾ ಹೇಳಿಕೆಯಿಂದ ಈ ಮೂವರು ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ಸಲ್ಲಿಸಿದ್ದರು.

ಅದರ ಬೆನ್ನಲ್ಲೇ ನಿನ್ನೆಯಷ್ಟೇ ಇವರ ನಿಕಟವರ್ತಿ, ಆಪ್ತ ಸಹಾಯಕ ವಹೀದ್ ಪತ್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು.
ಹೆಬ್ಬುಲ್ ಮುಜಾಹಿದ್ದೀನ್ ಕಮಾಂಡರ್ ನವೀದ್ ಬಾಬು ಒಳಗೊಂಡ ಭಯೋತ್ಪಾದಕ ಪ್ರಕರಣಗಳಲ್ಲಿ ಸಂಬಂಧ ಹೊಂದಿದ್ದಕ್ಕಾಗಿ ಈತನನ್ನು ಬಂಧಿಸಲಾಗಿತ್ತು.

ಪಿಡಿಪಿಯ ಮೂರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಧಮನ್ ಭಾಸಿನ್, ಫಿಲ್ ಸಿಂಗ್ ಮತ್ತು ಪ್ರೀತಮ್ ಕೊತ್ವಾಲ್ ಅವರು ಪಕ್ಷದಿಂದ ಹೊರನಡೆದಿದ್ದಾರೆ.

” ನಿರ್ಲಜ್ಜ, ಕೋಮುವಾದಿ ಅಂಶಗಳಿಂದ ಅಪಹರಿಸಲ್ಪಟ್ಟ ಪಕ್ಷವನ್ನು ತೊರೆಯುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ” ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಪಕ್ಷವನ್ನು ಒಂದು ಉದ್ದೇಶದಿಂದಾಗಿ ನಾವು ಸೇರ್ಪಡೆಯಾಗಿದ್ದೆವು. ಆದರೆ ಪಕ್ಷದ ಮೂಲ ಸಿದ್ಧಾಂತವನ್ನು ಬದಿಗಿಟ್ಟು ವಿವಾದಾತ್ಮಕ ಹಾಗೂ ಪ್ರಚೋದನಕಾರಿಯಾಗುವಂಥ ಹೇಳಿಕೆಗಳನ್ನು ನೀಡುತ್ತಾ ಸಾಗುವ ಮೂಲಕ ತನ್ನ ಧೈಯೋದ್ದೇಶವನ್ನು ಮರೆತಿದೆ. ಇಂಥ ಪಕ್ಷದಲ್ಲಿ ನಾವು ಇರಲು ಸಾಧ್ಯವಿಲ್ಲ ಎಂದಿದ್ದಾರೆ.

Advertisement
web