13 ಸೆಪ್ಟೆಂಬರ್ 2013 ರಾಷ್ಟ್ರ ರಾಜಕೀಯದ ಇತಿಹಾಸದಲ್ಲಿ ಸಂಚಲನ ಸೃಷ್ಟಿಸಿದ ದಿನ. ಯಾರೂ ಊಹಿಸಲಾರದ ಮಹತ್ವದ ಘೋಷಣೆಯನ್ನು
7 ವರ್ಷದ ಹಿಂದೆ ಬಿಜೆಪಿ ಪಕ್ಷವು ಹೊರಡಿಸಿತು.

Advertisement

ಪ್ರೆಸ್ ಕಾನ್ಫರೆನ್ಸ್ ವೊಂದರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಪ್ರಧಾನಮಂತ್ರಿ ಅಭ್ಯರ್ಥಿಯೆಂದು ಘೋಷಿಸಿದ್ದರು.

ಅಟಲ್ ಬಿಹಾರಿ ವಾಜಪೇಯಿ ಅವರ ಆಪ್ತರಾಗಿದ್ದ, ಬಿಜೆಪಿಯ ಮುತ್ಸದ್ಧಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಪ್ರಧಾನಮಂತ್ರಿ ಅಭ್ಯರ್ಥಿಯಾಗುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು.

ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರನ್ನು ಘೋಷಿಸಿದ ನಂತರ ಮಿಶ್ರಪ್ರತಿಕ್ರಿಯೆಗಳು ಕೇಳಿ ಬರಲು ಪ್ರಾರಂಭವಾಯಿತು. ಗುಜರಾತ್ ನ ಗೋದ್ರಾ ಹತ್ಯಕಾಂಡವನ್ನು ಎಲ್ಲರೂ ಬೊಟ್ಟುಮಾಡಿ ತೋರಿಸುತ್ತಾ ಇಂತಹ ಅಭ್ಯರ್ಥಿ ಭಾರತವನ್ನು ಆಳಲು ಸಮರ್ಥರಾ? ಎಂಬ ಮಾತುಗಳು ದೇಶವ್ಯಾಪಿಯಾಗಿ ಕೇಳಿಬರತೊಡಗಿದವು.

13 ವರ್ಷಗಳ ಕಾಲ ಗುಜರಾತ್ ನ ಸಿಎಂ ಆಗಿ ಯಶಸ್ವಿ ಆಡಳಿತ ನಡೆಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ.

2 ಅಕ್ಟೋಬರ್ 2001ರಲ್ಲಿ ಕೇಶುಭಾಯಿ ಪಟೇಲ್ ಅವರು ಅನಾರೋಗ್ಯದ ಕಾರಣದಿಂದಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.‌ ತದನಂತರ ಗುಜರಾತ್ ನ ಗದ್ದುಗೆ ಏರಿದ ನರೇಂದ್ರ ಮೋದಿ ರಾಜ್ಯದಲ್ಲಿ ಅಭಿವೃದ್ಧಿ ಪಥದತ್ತ ಕೊಂಡೊಯ್ದರು.

26 ಮೇ 2014ರಂದು ದೇಶದ 15ನೇ ಪ್ರಧಾಪ್ರಧಾನಮಂತ್ರಿಯಾಗಿಮಂತ್ರಿಯಾಗಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪಾಕಿಸ್ಥಾನದ ಪ್ರಧಾನಮಂತ್ರಿಯಾಗಿದ್ದ ನವಾಜ್ ಷರೀಫ್ ಭಾಗಿಯಾಗಿದ್ದು ವಿಶೇಷವಾಗಿತ್ತು.

ಒಟ್ಟು 6 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ಈ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ದಾಖಲೆ ನಿರ್ಮಿಸಿದ್ದಾರೆ.

ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಅಮೆರಿಕಾ 2005ರಲ್ಲಿ ಪ್ರಧಾನಿ ಮೋದಿಯವರ ವೀಸಾವನ್ನು ನಿಷೇಧಿಸಿತ್ತು. 2014ರಲ್ಲಿ ರೆಡ್ ಕಾರ್ಪೆಟ್ ಹಾಸಿ ಪ್ರಧಾನಿ ಮೋದಿಯನ್ನು ಅಮೆರಿಕಾಕ್ಕೆ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಆಹ್ವಾನಿಸಿದ್ದರು. ಸುಮಾರು 18,000 ಜನರು ನೆರೆದಿದ್ದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಸೆಪ್ಟೆಂಬರ್ 28, 2014ರಂದು ಪ್ರಧಾನಿ ಮೋದಿ ಮಾತನಾಡಿದ್ದರು.

ತದನಂತರ ಒಬಾಮಾ ಮತ್ತು ಮೋದಿಯ ಬಾಂಧವ್ಯ ವೃದ್ಧಿಸಿತು. 2015ರಲ್ಲಿ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಬರಾಕ್ ಒಬಾಮಾ ಭಾಗಿಯಾಗಿದ್ದು ವಿಶೇಷವಾಗಿತ್ತು. ಭಾರತದ ಗಣರಾಜ್ಯೋತ್ಸವ ದಿನಾಚರಣೆಯಂದು ಭಾಗವಹಿಸಿದ ಮೊದಲ ಅಮೆರಿಕಾ ಅಧ್ಯಕ್ಷ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

ಆಡಳಿತಾವಧಿಯ ಮೈಲಿಗಲ್ಲುಗಳು.

ಮಾತಿನ ಪ್ರಖರತೆ, ವರ್ಚಸ್ಸಿನಂದಲೇ ಮೋಡಿ ಮಾಡುವ ಪ್ರಧಾನಿ ಮೋದಿಯ ಕಾರ್ಯವೈಖರಿಗೆ ಹಲವು ಜನರು ಬಹುಪರಾಖ್ ಎಂದಿದ್ದಾರೆ. ಮುಖ್ಯವಾಗಿ ಅಪನಗದೀಕರಣ, ಜಿಎಸ್ ಟಿ, ತ್ರಿವಳಿ ತಲಾಖ್ ನಿಷೇಧ, ಸ್ವಚ್ಛ ಭಾರತ್ ಮಿಷನ್, ಡಿಜಿಟಲ್ ಇಂಡಿಯಾ, ಯೋಗ, ಮೇಕ್ ಇನ್ ಇಂಡಿಯಾ, ರಾಮಮಂದಿರ ನಿರ್ಮಾಣ, ಆತ್ಮನಿರ್ಭರತೆ, ಚೀನಾ ವಸ್ತುಗಳ ನಿಷೇಧ ಪ್ರಧಾನಿಯಾಗಿ ಮೋದಿ ಕೈಗೊಂಡ ಮಹತ್ವದ ಯೋಜನೆಗಳು.

ಇದಲ್ಲದೇ ಪ್ರತಿ ತಿಂಗಳು ಮನ್ ಕಿ ಬಾತ್ ಎಂಬ ವಿಶೇಷ ರೇಡಿಯೋ ಸಂವಾದ ಕಾರ್ಯಕ್ರಮದಲ್ಲಿ ದೇಶದ ಜನರೊಂದಿಗೆ ಮಾತನಾಡುತ್ತಾರೆ.

ಕೋವಿಡ್- 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ತೆಗೆದುಕೊಂಡ ಸೂಕ್ತ ಕ್ರಮಗಳು ವಿಶ್ವವ್ಯಾಪಿಯಾಗಿ ಪ್ರಶಂಸೆಗೆ ಪಾತ್ರವಾಗಿದೆ.

ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೋದಿಯವರು ತಮ್ಮ ಆಡಳಿತಾವಧಿಯಲ್ಲಿ ಕೈಗೊಳ್ಳುತ್ತಿದ್ದಾರೆ‌. ಭಾರತವು ವಿಶ್ವಗುರುವಾಗುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ.

Advertisement
web