ನವರಾತ್ರಿ ಕಳೆದು ದಸರಾ ಸಂಭ್ರಮದಲ್ಲಿ ನಾಡಿದೆ.ಇಂದಿನ ಈ ಸಂಕಷ್ಟದ ಸಂದರ್ಭದಲ್ಲಿ ಸರಕಾರದ ಸೂಚನೆಯಂತೆ ಸುರಕ್ಷತೆಯೊಂದಿಗೆ ನಾವು ಮನ-ಮನೆಯಲ್ಲೇ ಸಂಭ್ರಮ ಪಡಬೇಕಾದ ಸ್ಥಿತಿ ಬಂದೊದಗಿರುವುದು ಒಂದು ದುರಂತ.ಇರ್ಲಿ ಬರುವ ನಾಳೆಗಳ ಕಡೆ ಆತ್ಮ ವಿಶ್ವಾಸದಿಂದ ಹೆಜ್ಜೆ ಹಾಕೋಣ..”

Advertisement


ನವರಾತ್ರಿ ವಿಜಯನಗರದ ರಾಯರ ನಾಡಹಬ್ಬ-ಉತ್ಸವವಾಗಿತ್ತು.ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ಹಬ್ಬಾಚರಣೆ ಉತ್ತುಂಗ ಶಿಖರಕ್ಕೇರಿತಂತೆ…!!!
ಹಂಪಿಯ ವರ್ಣರಂಜಿತ ಉತ್ಸವ ನೋಡಲು ವಿಜಯನಗರದ ರಾಜರು ಎತ್ತರದ ದಿಬ್ಬ ಹತ್ತಿ ಸಂಭ್ರಮಿಸುತ್ತಿದ್ದರು…ಮುಂದೆ ಅದುವೇ “ಮಹಾನವಮಿ ದಿಬ್ಬ”ಎಂಬ ಖ್ಯಾತಿಗೆ ಒಳಗಾಯಿತು ಎಂದು ದಾಖಲೆಗಳಿಂದ ತಿಳಿಯಬಹುದು.

ವಿಜಯನಗರ ಸಾಮ್ರಾಜ್ಯದಲ್ಲಿ ಕ್ರಿ.ಶ.1336ರಿಂದ1565ರವರೆಗೆ ನವರಾತ್ರಿ ಹಬ್ಬ ನಾಡಹಬ್ಬವಾಗಿತ್ತು.ಮುಂದೆ ಕ್ರಿ.ಶ.1610ರಿಂದ ರಾಜ ಒಡೆಯರ್ ಶ್ರೀರಂಗಪಟ್ಟಣದಲ್ಲಿ ಮೊದಲಬಾರಿಗೆ ದಸರಾ ಹಬ್ಬ ಆಚರಣೆ ಆರಂಭಿಸಿದರು.ಅವರ ಏಕೈಕ ಪುತ್ರ ರಾಜಕುಮಾರ ನರಸರಾಜ ಒಡೆಯರ್ ನವರಾತ್ರಿಯ ಹಿಂದಿನ ದಿನ ಮರಣ ಹೊಂದಿದಾಗ ಸೂತಕದ ಛಾಯೆ ಆವರಿಸಿತಂತೆ…ಮಂತ್ರಿ…ಅನುಭವಿಗಳೊಂದಿಗೆ ರಾಜ ಒಡೆಯರ್ ಸಮಾಲೋಚಿಸಿ -“ರಾಜವಂಶದ ಯಾರೇ ಅಸ್ತಂಗತರಾದರೂ ದಸರಾ ಆಚರಣೆಗಳನ್ನು ನಿಲ್ಲಿಸಲೇ ಬಾರದು…”ಎಂದು ಅಪ್ಪಣೆ ಹೊರಡಿಸಿದರಂತೆ.

ಹೀಗೆ ಮೈಸೂರಿನಲ್ಲಿ ಕ್ರಿ.ಶ.1799ರಿಂದ ದಸರಾ ನಾಡಹಬ್ಬ ಆರಂಭವಾಯಿತು.ಮುಂದೆ ಕ್ರಿ.ಶ.1805ರಿಂದ ಮೂರನೇ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆಯಲ್ಲಿ ವಿಶೇಷ ದರ್ಬಾರ್ ನಡೆಸುವ ಸಂಪ್ರದಾಯ ಆರಂಭಿಸಲಾಯಿತು.
ದಸರಾ ಸಂಭ್ರಮದ ಹೊಸ್ತಿಲಲ್ಲ ನಾಡಜನತೆ ನಾವಿದ್ದೇವೆ.

2020ರ ಈ ಸಂಭ್ರಮವನ್ನು ನಾವಿದ್ದ ಕಡೆಯಲ್ಲೇ (ಸುರಕ್ಷತೆಯೊಂದಿಗೆ ಸಂಭ್ರಮಿಸಿ ನಾಡದೇವತೆ ಶ್ರೀ ಚಾಮುಂಡೇಶ್ವರೀ ದೇವಿಯ ಅನುಗ್ರಹಕೆ ಪಾತ್ರರಾಗೋಣ.
📙 ನಾರಾಯಣ ರೈ ಕುಕ್ಕುವಳ್ಳಿ.

Advertisement
web