ಬೆಂಗಳೂರು: ರಾಜ್ಯದ ಮೇಲೆ ಹಿಂದಿ ಭಾಷೆಯನ್ನು ಅನಗತ್ಯವಾಗಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ರಾಜ್ಯಪಾಲ ವಜೂಭಾಯಿ ವಾಲಾ ಅವರು ದೀಪಾವಳಿ ಹಬ್ಬದ ಪ್ರಯುಕ್ತ ಹಿಂದಿಯಲ್ಲಿ ಶುಭ ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೂ ಹಿಂದಿ ಭಾಷೆಯಲ್ಲೆ ಮುದ್ರಿತ ಶುಭಾಶಯ ಪತ್ರಗಳನ್ನು ರವಾನಿಸಿದ್ದಾರೆ.

ರಾಜ್ಯದ ಖಜಾನೆಯಿಂದ ಹಣ ಪಾವತಿಸಿರುವ ಈ ಶುಭಾಶಯ ಪಾತ್ರಗಳಲ್ಲಿ ಒಂದೇ ಒಂದು ಕನ್ನಡ ಪದವಿಲ್ಲದಿರುವುದು ಕನ್ನಡ ಪರ ಹೋರಾಟಗಾರರ,ಸಾಹಿತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement
web