ಕಲಾಂ ಅವರು ತಮ್ಮ ವೃತ್ತಿ ಜೀವನದಲ್ಲಿ ವಿಜ್ಞಾನಿಯಾಗಿ ತಿರುವನಂತಪುರದಲ್ಲಿ ಹಲವು ವರುಷಗಳ ಕಾಲ ನೆಲೆಸಿದ್ದರು. ಡಾ.ಅಬ್ದುಲ್ ಕಲಾಂರವರು ರಾಷ್ಟ್ರಪತಿಯಾದ ಬಳಿಕ ಒಮ್ಮೆ ಕೇರಳದ ತಿರುವನಂತಪುರದ ರಾಜ್ಯ ಭವನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಇವರ ಬಗೆಯಿಂದ ಇವರು ಸೂಚಿಸಿದ ಇಬ್ಬರು ಅಧ್ಯಕ್ಷರ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ನಿಶ್ಚಯಿಸಲಾಗಿತ್ತು.ನಿಮ್ಮ ಊಹೆಗೂ ಇಲ್ಲದ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಲಾಂ ಅವರು ಸೂಚಿಸಿದಂತೆ ಒಬ್ಬರು ಚಮ್ಮಾರರನ್ನು ಮತ್ತು ಒಂದು ಸಣ್ಣ ಹೋಟೆಲಿನ ಮಾಲೀಕರನ್ನು ಅಧ್ಯಕ್ಷರ ಅತಿಥಿಗಳನ್ನಾಗಿ ಬರಮಾಡಿದ್ದರು.

Advertisement

ಅಂತಹ ಸರಳ ಸದ್ಗುಣದ ವ್ಯಕ್ತಿತ್ವ ಕಲಾಂ ಅವರು.ಮಕ್ಕಳಲ್ಲಿ ಮಕ್ಕಳಂತೆಯೂ,ಯುವಕರಲ್ಲಿ ಯುವಕರಂತೆಯೂ,ಹಿರಿಯರಲ್ಲಿ ಹಿರಿಯರಂತೆಯೂ ಬೆಳಗಿದ ಬದುಕಿದ ಬೆಳಕು,ಕ್ಷಿಪಣಿ ಮನುಷ್ಯ ನಮ್ಮಕಲಾಂ ಸಾರ್.

ಬರಹ: ಯಜ್ಞೇಶ್ ಆಚಾರ್ಯ

Advertisement
web