ಸಿಡ್ನಿ:ಇಲ್ಲಿನ ಸಿಡ್ನಿ ಕ್ರಿಕೆಟ್ ಅಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 51 ರನ್‌ಗಳಿಂದ ಜಯಗಳಿಸಿತು.

Advertisement

ಮೊದಲು ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 389 ರನ್ ದಾಖಲಿಸಿತ್ತು.
ಸ್ಟೀವ್ ಸ್ಮಿತ್ 104, ಡೇವಿಡ್ ವಾರ್ನರ್ 83, ಮಾರ್ನಸ್ ಲಾಬುಶೇನ್ 70 ಮ್ಯಾಕ್ಸ್‌ವೇಲ್ 63 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

390 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿ ಸೋಲು ಅನುಭವಿಸಿತು.

ಭಾರತದ ಪರ ವಿರಾಟ್ ಕೊಹ್ಲಿ 89, ಕೆ.ಎಲ್.ರಾಹುಲ್ 76, ಶಿಖರ್ ಧವನ್ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 3, ಆ್ಯಡಂ ಜಂಪಾ 2, ಜೋಶ್ ಹ್ಯಾಜಲ್‌ವುಡ್ 2 ವಿಕೆಟ್ ಪಡೆದರು.

3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು,ಸರಣಿ ಕೈವಶಪಡಿಸಿಕೊಂಡಿದೆ.

ಆಸ್ಟ್ರೇಲಿಯಾ: 4 ವಿಕೆಟ್‌ಗೆ 389 (ವಾರ್ನರ್ 83, ಫಿಂಚ್ 60 ಸ್ಟೀವನ್ ಸ್ಮಿತ್ 104,ಲಾಬುಶೇನ್ 70, ಗ್ಲೇನ್ ಮ್ಯಾಕ್ಸ್‌ವೆಲ್ 63*, ಶಮಿ) 73 ಕ್ಕೆ 1, ಬುಮ್ರಾ 79ಕ್ಕೆ 1, ಪಾಂಡ್ಯ 24 ಕ್ಕೆ 1)
ಭಾರತ: 9 ವಿಕೆಟ್‌ಗೆ 338 (ಮಯಾಂಕ್ 28, ಧವನ್ 30, ಕೊಹ್ಲಿ 89, ಶ್ರೇಯಸ್ ಅಯ್ಯರ್ 38, ಕೆಎಲ್ ರಾಹುಲ್ 76, ಹಾರ್ದಿಕ್ ಪಾಂಡ್ಯ 28, ಜಡೇಜಾ 24, ಕಮ್ಮಿನ್ಸ್ 67ಕ್ಕೆ 3, ಹ್ಯಾಸಲ್‌ವುಡ್ 59ಕ್ಕೆ 2, ಆಡಂ ಜಂಪಾ 62ಕ್ಕೆ 2, ಹೆನ್ರಿಕ್ಸ್ 34ಕ್ಕೆ1, ಮ್ಯಾಕ್ಸ್‌ವೆಲ್ 34ಕ್ಕೆ 1).

Advertisement
web