ಸಿಡ್ನಿ: ಕೊರೊನ ಮಹಾಮಾರಿಯಿಂದಾಗಿ ಭಾರತದಲ್ಲಿ ನಿಂತಿದ್ದ ಕ್ರಿಕೆಟ್ ಚಟುವಟಿಕೆ ಐಪಿಎಲ್ ಟೂರ್ನಿಯೊಂದಿಗೆ ಪ್ರಾರಂಭಗೊಂಡಿದೆ, 9 ತಿಂಗಳಿನಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯೊಂದಿಗೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದೆ.
ಆಸ್ಟ್ರೇಲಿಯಾ ವಿರುದ್ದದ ಸುದೀರ್ಘ ಸರಣಿ ಇವತ್ತಿನ ಪಂದ್ಯದೊಂದಿಗೆ ಪ್ರಾರಂಭಗೊಂಡಿದೆ.
ಇವತ್ತು ನಡೆಯುವ ಪ್ರಥಮ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿತು.
Update: Australia have won the toss in the first ODI and have opted to bat first. #AUSvIND pic.twitter.com/YbYFN34zMu
— BCCI (@BCCI) November 27, 2020
ಎರಡು ತಂಡಗಳ ವಿವರ:
ಭಾರತ: ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ
ಆಸ್ಟ್ರೇಲಿಯಾ: ಆರನ್ ಫಿಂಚ್ (ಕ್ಯಾಪ್ಟನ್), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೆನ್ ಮ್ಯಾಕ್ಸ್ವೆಲ್, ಅಲೆಕ್ಸ್ ಕೇರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ, ಜೋಶ್ ಹೇಝಲ್ವುಡ್
ಪಂದ್ಯದ ನೇರಪ್ರಸಾರವನ್ನು ಸೋನಿ ಟೆನ್ 1 ಸೋನಿ ಟೆನ್ 3 ಸೋನಿ ಸಿಕ್ಸ್ ಡಿಡಿ ಸ್ಪೋರ್ಟ್ಸ್ ನಲ್ಲಿ ವೀಕ್ಷಸಬಹುದಾಗಿದೆ. ರೇಡಿಯೋ ಕೇಳುಗರು ಆಕಾಶವಾಣಿಯಲ್ಲಿ ಪಂದ್ಯದ ಸಂಪೂರ್ಣ ವಿಶ್ಲೇಷಣೆ ಕೇಳಬಹುದಾಗಿದೆ.
https://twitter.com/akashvanisports/status/1332141221922291712?s=20