ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಅಂಗಣದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 66 ರನ್ಗಳಿಂದ ಜಯಗಳಿಸಿತು.
ಮೊದಲು ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 374 ರನ್ ದಾಖಲಿಸಿತ್ತು. ಈ ಸವಾಲನ್ನು ಸ್ವೀಕರಿಸಿ ಆಸ್ಟ್ರೇಲಿಯಾದ ವಿರುದ್ಧ ಬ್ಯಾಟಿಂಗ್ಗಿಳಿದ ಭಾರತ ತಂಡದ ಆರಂಭಿಕ ಪ್ರದರ್ಶನ ನಿರಾಸೆ ಮೂಡಿಸಿತ್ತು. ಆರಂಭಿಕ ದಾಂಡಿಗರಾಗಿ ಮಯಂಕ್ ಅಗರವಾಲ್ ಮತ್ತು ಶಿಖರ್ ಧವನ್ ಕ್ರೀಸ್ಗಿಳಿದಿದ್ದು 6ನೇ ಓವರ್ನಲ್ಲಿ ಮಯಂಕ್ ವಿಕೆಟ್ ಕಳೆದುಕೊಂಡರು.
ಮಯಂಕ್ ಅಗರ್ವಾಲ್ 22 ರನ್ ದಾಖಲಿಸಿ ಮ್ಯಾಕ್ಸ್ವೆಲ್ಗೆ ಕ್ಯಾಚಿತ್ತು ಪೆವಿಲಿಯನ್ಗೆ ನಡೆದಾಗ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ನಾಯಕ ವಿರಾಟ್ ಕೊಹ್ಲಿ 21 ಎಸೆತಗಳಲ್ಲಿ 21 ರನ್ ದಾಖಲಿಸಿ ಹ್ಯಾಜಲ್ವುಡ್ ಎಸೆತಕ್ಕೆ ಔಟಾದರು. ನಂತರ ಬಂದ ಶ್ರೇಯಸ್ ಅಯ್ಯರ್ (2),ಕೆ,ಎಲ್.ರಾಹುಲ್ (12) ರನ್ ಗಳಿಸಿ ಪೆವಿಲಿಯನ್ತ್ತ ಹೆಜ್ಜೆ ಹಾಕಿದರು
ಈ ಹೊತ್ತಿಗೆ ಭಾರತ ತಂಡದ ಆಧಾರಸ್ಥಂಭವಾಗಿ ನಿಂತದ್ದು ಶಿಖರ್ ಧವನ್ ಹಾಗು ಹಾರ್ದಿಕ್ ಪಾಂಡ್ಯ. 118 ರನ್ಗಳ ಜೊತೆಯಾಟವಾಡಿದ ಧವನ್-ಪಾಂಡ್ಯ ತಂಡದ ಮೊತ್ತ ಸ್ಥಿರಗೊಳಿಸಲು ಸಹಕರಿಸಿದರು.
ಆದರೆ 35ನೇ ಓವರ್ನಲ್ಲಿ ಶಿಖರ್ ಧವನ್ ಜಂಪಾ ಎಸೆತಕ್ಕೆ ಸ್ಟಾರ್ಕ್ಗೆ ಕ್ಯಾಚಿತ್ತು ಔಟಾದರು, 86 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ ಧವನ್ 74 ರನ್ ದಾಖಲಿಸಿದರು.ಇದರ ಬೆನ್ನಲ್ಲೇ 39ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಪತನವಾಯಿತು. 76 ಎಸೆತಗಳಲ್ಲಿ 90 ರನ್ ದಾಖಲಿಸಿದ ಪಾಂಡ್ಯ ಇನ್ನೇನೋ ಶತಕ ಬಾರಿಸಲು ಹತ್ತಿರವಾಗುತ್ತಿದಂತೆ ಜಂಪಾ ಎಸೆತಕ್ಕೆ ಸ್ಟಾರ್ಕ್ಗೆ ಕ್ಯಾಚಿತ್ತರು. ಅದ್ಭುತ ಪ್ರದರ್ಶನ ನೀಡಿದ ಪಾಂಡ್ಯ 7 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿದ್ದಾರೆ. ನಂತರ ಬಂದ ರವೀಂದ್ರ ಜಡೇಜಾ 37 ಎಸೆತಗಳಲ್ಲಿ 25 ರನ್ ದಾಖಲಿಸಿ ಜಂಪಾ ಎಸೆತಕ್ಕೆ ಔಟಾದರು.
ಜಡೇಜಾ ನಂತರ ಬ್ಯಾಟಿಂಗ್ಗಿಳಿದ ಸೈನಿ 35 ಎಸೆತಗಳಲ್ಲಿ 29 ರನ್ ದಾಖಲಿಸಿ ಔಟಾಗದೆ ಉಳಿದರು. ಮೊಹಮ್ಮದ್ ಶಮಿ 13 ರನ್ ಗಳಿಸಿ ಔಟಾದರೆ, ಬೂಮ್ರಾ 3 ಎಸೆತಗಳಲ್ಲಿ ರನ್ ಕಲೆ ಹಾಕದೆ ಉಳಿದರು.
ಸ್ಕೋರ್ ಕಾರ್ಡ್:
ಆಸ್ಟ್ರೇಲಿಯಾ: 6 ವಿಕೆಟ್ ನಷ್ಟಕ್ಕೆ 374 (ಡೇವಿಡ್ ವಾರ್ನರ್ 69 ಆರನ್ ಫಿಂಚ್ 114, ಸ್ಟೀವನ್ ಸ್ಮಿತ್ 105, ಗ್ಲೆನ್ ಮ್ಯಾಕ್ಸ್ವೆಲ್ 45, ಮೊಹಮ್ಮದ್ ಶಮಿ 59 ಕ್ಕೆ 3, ಜಸ್ಪ್ರೀತ್ ಬುಮ್ರಾ 73ಕ್ಕೆ 1, ನವದೀಪ್ ಸೈನಿ 83ಕ್ಕೆ 1, ಯಜುವೇಂದ್ರ ಚಾಹಲ್ 89ಕ್ಕೆ 1).
ಭಾರತ: 8 ವಿಕೆಟ್ಗೆ 308 (ಮಯಾಂಕ್ ಅಗರ್ವಾಲ್ 22, ಶಿಖರ್ ಧವನ್ 74, ಹಾರ್ದಿಕ್ ಪಾಂಡ್ಯ 90, ವಿರಾಟ್ ಕೊಹ್ಲಿ 21, ಜೋಸ್ ಹ್ಯಾಸಲ್ವುಡ್ 55ಕ್ಕೆ 3, ಆಡಂ ಜಂಪಾ 54ಕ್ಕೆ 3).