ಅಮೆರಿಕಾದ ಬಹುರಾಷ್ಟ್ರೀಯ ತಂತ್ರಜ್ಞಾನ ದೈತ್ಯ ಅಮೆಜಾನ್ ನಮಗೆಲ್ಲ ಗೊತ್ತೇ ಇದೆ.ಆಗೊಮ್ಮೆ ಈಗೊಮ್ಮೆ ಶಾಪಿಂಗ್ ಮಾಡಿಯೇ ಇರುತ್ತೇವೆ.ಇದರ ಸಿ.ಇ ಓ “ಜೆಫ್ ಬಿಜ್ಹೊ “ಒಮ್ಮೆ ಮಾತನಾಡುವಾಗ ಹೇಳುತ್ತಾರೆ!..“ನಾವು ಪ್ರತಿಯೊಬ್ಬರು ನಮ್ಮಲ್ಲಿರುವ ಪ್ಯಾಶನ್(passion)ನ್ನು ಕಂಡುಕೊಳ್ಳಬೇಕು.ಪ್ಯಾಶನ್ ನಾವು ಆಯ್ಕೆ ಮಾಡಬೇಕಾದ ವಸ್ತು ಅಲ್ಲ.ಬದಲಾಗಿ ನಮ್ಮ ಪ್ಯಾಶನ್ ನಮ್ಮನ್ನು ಆಯ್ಕೆ ಮಾಡುವುದು.ನಾವೆಲ್ಲ ಒಂದಲ್ಲ ಒಂದು ಪ್ಯಾಶನ್ ಅನ್ನು ಹೊಂದಿರುತ್ತೇವೆ.ಇವುಗಳು ದೇವದತ್ತವಾಗಿರುವಂತವು.ನಾವು ಅವುಗಳನ್ನು ಕಂಡುಕೊಳ್ಳಬೇಕು,ಅದನ್ನು ಉತ್ತೇಜಿಸಬೇಕು.”

Advertisement

ಯಾವಾಗ ನೀವು ನಿಮ್ಮ ಪ್ಯಾಶನ್ ಅನ್ನು ಕಂಡುಕೊಳ್ಳುತ್ತಿರೋ, ಇದು ನಾವು ನಮಗೆ ಕೊಡಮಾಡತಕ್ಕ ಒಂದು ಶ್ರೇಷ್ಠ ಬಹುಮಾನವಾಗಿದೆ.ಇದು ನಿಮ್ಮ ಬದುಕಿಗೆ ನಿರ್ದಿಷ್ಟ ಗುರಿ ,ನಿರ್ದಿಷ್ಟ ದಾರಿ,ಉದ್ದೇಶ ನೀಡುತ್ತದೆ.ಯಾವಾಗ ಇದು ಸಾಕಾರ ಆಗುತ್ತದೆಯೋ ಆಗ ನೀವು ಮಾಡುವ ಎಲ್ಲ ಕೆಲಸವೂ ನಿಮ್ಮದು ಎಂಬ ಭಾವ ಮೂಡುವುದು.ಆದರೆ ನಾವು ನಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಪ್ಯಾಶನ್ ಅನ್ನು ಕಂಡುಕೊಳ್ಳುವಲ್ಲಿ ಎಡುವುತ್ತೇವೆ,ಇದು ಜೀವನದಲ್ಲಿನ ಕೆಲವು ಸಾಧನೆಗೆ ತೊಡಕಾಗುವುದು,ಕೆಲಸದಲ್ಲಿ ಉತ್ಸಾಹ ಕಮ್ಮಿಯಾಗುವುದು,ಆಸಕ್ತಿ ಕಳೆದುಕೊಳ್ಳುವುದು ಹೀಗೆ ಹಲವು ಸಂಗತಿಗಳಿಗೆ ಕಾರಣವಾಗುವುದು.

ಜೆಫ್ ಅವರು ಹೇಳುವಂತೆ, ನಮ್ಮ ಪ್ಯಾಶನ್ (passion)ನಲ್ಲಿನ ಹಲವು ಪ್ರಯೋಗಗಳು ನಮ್ಮನ್ನು ಉನ್ನತಿಕರಿಸಲು ಸಹಾಯ ಮಾಡುತ್ತದೆ.ಇವು ಸಾಧನೆಗೆ ಪೂರಕಗಳಾಗುತ್ತವೆ ಎಂದು.
ನಮ್ಮಲ್ಲಿರುವ  ಪ್ಯಾಷನ್ ಮೇಲೆ ಕಷ್ಟಪಟ್ಟು ದುಡಿಯಬೇಕು.ಸಾಧನೆಗೆ ಅಣಿಯಾಗಬೇಕು,ಸಾಧಿಸುವವನಿಗೆ ನಮ್ಮ ಬದುಕು ಒಂದು ಮಾದರಿಯ ಏಣಿಯಾಗಬೇಕು.ಫ್ಯಾಷನ್(fashion) ಗಿಂತ ಜೀವನದಲ್ಲಿ ಪ್ಯಾಷನ್(passion) ಮುಖ್ಯ.

ಬರಹ: ಯಜ್ಞೇಶ್ ವಿ ಆಚಾರ್ಯ

Advertisement
web