ನವದೆಹಲಿ: ಭಾರತ ತಂಡದ ಮಾಜಿ ನಾಯಕ, ಕ್ರಿಕೆಟ್ ದಂತ ಕಥೆ ಕಪಿಲ್ ದೇವ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 61 ವರ್ಷದ ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲಾಸ್ಟಿ ಸರ್ಜರಿ ಮಾಡಲಾಗಿದ್ದು, ಈಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.
ಇದರ ಬಗ್ಗೆ ಸ್ವತಃ ಕಪಿಲ್ ದೇವ್ ಅವರು ಟ್ವಿಟ್ಟರ್, ಇನ್ಸ್ಟಾಗ್ರಾಮ್ ಮೂಲಕ ತಿಳಿಸಿ ಅರೋಗ್ಯ ಸುಧಾರಿಸಲು ಹಾರೈಸಿದ ಎಲ್ಲರಿಗೆ ಧನ್ಯವಾದ ತಿಳಿಸಿದ್ದಾರೆ

Advertisement

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗು ಭಾರತಕ್ಕೆ ಕ್ರಿಕೆಟ್ ವಿಶ್ವ ಕಪ್ ಚಾಂಪಿಯನ್ ಪಟ್ಟ ತಂದು ಕೊಟ್ಟ ಪ್ರಥಮ ನಾಯಕ ಕಪಿಲ್ ದೇವ್, 1959 ರ ಜನವರಿ 6 ರಂದು ಜನಿಸಿದ ಕಪಿಲ್ ದೇವ್, 1978 ರಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯ ಮೂಲಕ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು
ಪ್ರಸ್ತುತ ನಡೆಯುತ್ತಿರುವ ಡ್ರೀಮ್ 11 ಐಪಿಎಲ್ ಟೂರ್ನಿಯಯ ಪಂದ್ಯಗಳ ಬಗ್ಗೆ ಖಾಸಗಿ ಸುದ್ದಿ ವಾಹಿನಿಯಲ್ಲಿ ವೀಕ್ಷಕ ವಿವರಣೆ ಹಾಗು ಪಂದ್ಯದ ವಿಶ್ಲೇಷಣೆ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು
ಭಾರತ ತಂಡದ ಪರ 131 ಟೆಸ್ಟ್‌ ಪಂದ್ಯಗಳಾಡಿರುವ ಹರಿಯಾಣ ಹರಿಕೇನ್‌ ಖ್ಯಾತಿಯ ಮಾಜಿ‌ ಆಲ್‌ರೌಂಡರ್‌, 5248 ರನ್‌ಗಳನ್ನು ಬಾರಿಸಿ, ಒಟ್ಟು 434 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನೂ ಆಡಿದ 225 ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ 3783 ರನ್‌ಗಳನ್ನು ಗಳಿಸಿ, 253 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
1983 ರ ಕ್ರಿಕೆಟ್ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಸ್ಮರಿಸಬಹುದಾಗಿದೆ.

Advertisement
web