ನವದೆಹಲಿ: ಈ ಬಾರಿ ಆಕಾಶದಲ್ಲಿ ಅಕ್ಟೋಬರ್ 31ರಂದು ಅಪರೂಪದ ಚಂದ್ರ ದರ್ಶನವಾಗಲಿದೆ. ಈ ಚಂದ್ರದರ್ಶನವನ್ನು ಬ್ಲುಮೂನ್ ಎಂದು ಕರೆಯಲಾಗುತ್ತದೆ.ಈ ಚಂದ್ರದರ್ಶನಕ್ಕೆ ಬ್ಲೂಮುನ್ ಹಾಗೂ ಹಂಟರ್ ಮೂನ್ ಎಂದು ಕೂಡ ಕರೆಯುತ್ತಾರೆ. ಹಂಟರ್ ಮೂನ್ ಎಂದರೆ ಚಳಿಗಾಲದಲ್ಲಿ ಬೇಟೆಯಾಡಲು ಹೋಗುವ ಬೇಟೆಗಾರರಿಗೆ ಸರಿಯಾದ ಬೆಳಕನ್ನು ನೀಡುವುದರಿಂದ ಅವರಿಗೆ ಹೆಚ್ಚು ಸಹಕಾರಿಯಾಗಿದೆ. ಹೀಗಾಗಿ ಈ ರೀತಿ ಹೆಸರು ಬಂದಿದೆ ಎಂಬ ಮಾಹಿತಿ ಇದೆ. ಅಕ್ಟೋಬರ್ 31 ರಂದು ಈಡೀ ಜಗತ್ತಿನಾದ್ಯಂತ ಗೋಚರಿಸಲಿರುವ ಈ ಹಂಟರ್ ಮೂನ್ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಲಿದೆ.ಹಾಗೂ ಇದು ಸುಮಾರು 2 ,3 ವರ್ಷಗಳಿಗೊಮ್ಮೆ ಗೋಚರಿಸುತ್ತದೆ ಮಾಹಿತಿ ದೊರಕಿದೆ.

Advertisement
Advertisement
web