ನವದೆಹಲಿ/ಹಾಂಗ್ ಕಾಂಗ್: ಈ ವಾರದ ಆರಂಭದಲ್ಲಿ ಕೆಲವು ಭಾರತೀಯ ಪ್ರಯಾಣಿಕರ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದ ನಂತರ ನಂತರ ಹಾಂಗ್ ಕಾಂಗ್ ದೆಹಲಿಯಿಂದ ಡಿಸೆಂಬರ್ 3 ರವರೆಗೆ ಏರ್ ಇಂಡಿಯಾ ವಿಮಾನಗಳನ್ನು ನಿಷೇಧಿಸಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

Advertisement

ಕೊರೊನ ಮಹಾಮಾರಿ ಹರಡಿದ ನಂತರ ಭಾರತೀಯರನ್ನು ಕರೆತರುವುದಕ್ಕಾಗಿ ಹಾಂಕಾಂಗ್ ಸರ್ಕಾರವು ಭಾರತದಿಂದ ಏರ್ ಇಂಡಿಯಾದ ವಿಮಾನಗಳನ್ನು ನಿಷೇಧಿಸಿರುವುದು ಇದು ಐದನೇ ಬಾರಿ.

ದೆಹಲಿ-ಹಾಂಗ್ ಕಾಂಗ್ ವಿಮಾನಗಳನ್ನು ಆಗಸ್ಟ್ 18 ರಿಂದ ಆಗಸ್ಟ್ 31 ರವರೆಗೆ, ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 3 ಮತ್ತು ಅಕ್ಟೋಬರ್ 17 ರಿಂದ ಅಕ್ಟೋಬರ್ 30 ರವರೆಗೆ ನಿಷೇಧಿಸಲಾಗಿತ್ತು ಮತ್ತು ಅಕ್ಟೋಬರ್ 28 ರಿಂದ ನವೆಂಬರ್ 10 ರ ಅವಧಿಯಲ್ಲಿ ಅದರ ಮುಂಬೈ-ಹಾಂಗ್ ಕಾಂಗ್ ವಿಮಾನಗಳನ್ನು ನಿಷೇಧಿಸಲಾಗಿತ್ತು.

ಜುಲೈನಲ್ಲಿ ಹಾಂಗ್ ಕಾಂಗ್ ಸರ್ಕಾರ ಹೊರಡಿಸಿದ ನಿಯಮಗಳ ಪ್ರಕಾರ, ಪ್ರಯಾಣದ 72 ಗಂಟೆಗಳ ಒಳಗೆ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಪ್ರಮಾಣಪತ್ರವನ್ನು ಹೊಂದಿದ್ದರೆ ಮಾತ್ರ ಭಾರತದ ಪ್ರಯಾಣಿಕರು ಹಾಂಗ್ ಕಾಂಗ್‌ಗೆ ಹೋಗಬಹುದು.

ಇದಲ್ಲದೆ, ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರು ಹಾಂಗ್ ಕಾಂಗ್ ತಲುಪಿದ ನಂತರದ ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ಹಾಂಗ್ ಕಾಂಗ್ ಸರ್ಕಾರದ ನಿಯಮಗಳ ಪ್ರಕಾರ ಭಾರತದ ಹೊರತಾಗಿ, ಬಾಂಗ್ಲಾದೇಶ, ಇಥಿಯೋಪಿಯಾ, ಫ್ರಾನ್ಸ್, ಇಂಡೋನೇಷ್ಯಾ, ಕಜಾಕಿಸ್ತಾನ್, ನೇಪಾಳ, ಪಾಕಿಸ್ತಾನ, ಫಿಲಿಪೈನ್ಸ್, ರಷ್ಯಾ, ದಕ್ಷಿಣ ಆಫ್ರಿಕಾ, ಯುಕೆ ಮತ್ತು ಯುಎಸ್ ದೇಶಗಳ ಎಲ್ಲಾ ಪ್ರಯಾಣಿಕರಿಗೆ ಕೋವಿಡ್ -19 ನೆಗೆಟಿವ್ಪ್ರ ಮಾಣಪತ್ರ ಕಡ್ಡಾಯವಾಗಿದೆ.

ಈ ದೇಶಗಳಿಂದ ಹಾಂಗ್ ಕಾಂಗ್‌ಗೆ ಹಾರಾಟ ಮಾಡುವ ವಿಮಾನ ಸಂಸ್ಥೆಗಳು ನಿರ್ಗಮನದ ಮೊದಲು ಒಂದು ಫಾರ್ಮ್ ಅನ್ನು ಸಲ್ಲಿಸಬೇಕಾಗಿದ್ದು, ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಕೋವಿಡ್ -19 ನಕಾರಾತ್ಮಕ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ ಎಂದು ದೃಡೀಕರಿಸಬೇಕಾಗುತ್ತದೆ.

ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ 23 ರಿಂದ ಭಾರತದಲ್ಲಿ ನಿಗದಿತ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಸ್ಥಗಿತಗೊಂಡಿವೆ.

ಆದರೆ, ಈ ವರ್ಷದ ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ಜುಲೈನಿಂದ ಏರ್ ಬಬಲ್ ಒಪ್ಪಂದಗಳ ಅಡಿಯಲ್ಲಿ ವಿಶೇಷ ವಿಮಾನಗಳನ್ನು ಹಾರಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.

ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದದಡಿಯಲ್ಲಿ, ಎರಡೂ ದೇಶಗಳ ವಿಮಾನಯಾನ ಸಂಸ್ಥೆಗಳು ಕೆಲವು ನಿರ್ಬಂಧಗಳೊಂದಿಗೆ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ನಿರ್ವಹಿಸಬಹುದು. ಭಾರತವು ಸುಮಾರು 20 ದೇಶಗಳೊಂದಿಗೆ ಇಂತಹ ಒಪ್ಪಂದಗಳನ್ನು ಮಾಡಿದೆ.

ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Advertisement
web