ಮಂಗಳೂರು/ಮೈಸೂರು: ಹಲವು ವರ್ಷಗಳ ಬೇಡಿಕೆಯಾಗಿದ್ದ ಮಂಗಳೂರು-ಮೈಸೂರು ವಿಮಾನಕ್ಕೆ ಇಂದು ಚಾಲನೆ ದೊರಕಿತು.

Advertisement

ಮೈಸೂರಿನಿಂದ ಬೆಳಗ್ಗೆ 10 :45 ಕ್ಕೆ ಹೊರಟ ವಿಮಾನ ಮಂಗಳೂರಿಗೆ 11.20 ಕ್ಕೆ ತಲುಪಿತು, ಇದರಲ್ಲಿ 25 ಪ್ರಯಾಣಿಕರು ಆಗಮಿಸಿದರು.ಮಂಗಳೂರಿನಿಂದ ಬೆಳಗ್ಗೆ 12.50 ಕ್ಕೆ ಹೊರಟ ವಿಮಾನ ಮೈಸೂರಿಗೆ 1.30 ಕ್ಕೆ ತಲುಪಿತು.


ಈ ವಿಮಾನದಲ್ಲಿ ಮೈಸೂರಿನಿಂದ ಮಂಗಳೂರಿಗೆ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆ ರವಾನಿಸಿದೆ. ವಿಶೇಷ ಅಂಚೆ ಲಕೋಟೆಯನ್ನು ಫಿಲಾಟಲಿ ಚಟುವಟಿಕೆಯ ಉತ್ತೇಜನಕ್ಕೆ ಆರಂಭಿಸಲಾಗಿದೆ.


ಮೈಸೂರಿನಲ್ಲಿ ಮಂಗಳೂರು ವಿಮಾನಕ್ಕೆ ಮೈಸೂರು ಸಂಸದ ಶ್ರೀ ಪ್ರತಾಪ್ ಸಿಂಹ, ಅಲಯನ್ಸ್ ಏರ್ ಸಿಇಓ ಹರ್ಪ್ರೀತ್ ಸಿಂಗ್ ಚಾಲನೆ ನೀಡಿದರು.


ಮಂಗಳೂರಿಗೆ ಬಂದ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಲ ಫಿರಂಗಿಗಳ ಮೂಲಕ ವಾಟರ್ ಸಲ್ಯೂಟ್ ನೀಡಿ ಸ್ವಾಗತಿಸಲಾಯಿತು.

 

ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಸೇವೆ ಲಭ್ಯವಿದ್ದು, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ವಿಮಾನ ವಾರದಲ್ಲಿ 4 ದಿನ ಸಂಚರಿಸಲಿದೆ.

Advertisement
web