ಹೈದರಾಬಾದ್: ಮುಂಬರುವ ನಾಲ್ಕು ಟೆಸ್ಟ್ ಸರಣಿಯ ಭಾರತೀಯ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿರುವ ಬೌಲರ್ ಮೊಹಮ್ಮದ್ ಸಿರಾಜ್ ಅವರು ಶುಕ್ರವಾರ ತಮ್ಮ ತಂದೆ ಮೊಹಮ್ಮದ್ ಗೌಸ್ ಅವರನ್ನು ಕಳೆದುಕೊಂಡರು.

Advertisement

ಸಿರಾಜ್ ತಂದೆ ಗೌಸ್ ಅವರಿಗೆ 53 ವರ್ಷ ಆಗಿತ್ತು ಮತ್ತು ಶ್ವಾಸಕೋಶದ ಕಾಯಿಲೆಗೆ ತುತ್ತಾಗಿ ನಿನ್ನೆ ವಿಧಿವಶರಾಗಿದ್ದಾರೆ.

ಬಡತನದ ಹಿನ್ನೆಲೆಯಿಂದ ಬಂದ ಗೌಸ್,ರಿಕ್ಷಾ ಓಡಿಸುತ್ತಾ ತನ್ನ ಮಗ ಸಿರಾಜ್ ಕ್ರಿಕೆಟಿಗನಾಗಲು ಪ್ರಮುಖ ಪಾತ್ರ ವಹಿಸಿದ್ದರು.

“ಮೊಹಮ್ಮದ್ ಸಿರಾಜ್ ಮತ್ತು ಅವರ ಕುಟುಂಬಕ್ಕೆ ಅವರ ತಂದೆಯನ್ನು ಕಾಲ್ಡೆಕೊಂಡ ದುಃಖಕ್ಕೆ ನಮ್ಮ ಹೃತ್ಪೂರ್ವಕ ಪ್ರಾರ್ಥನೆಗಳು ಮತ್ತು ಸಂತಾಪಗಳು. ಈ ಕಷ್ಟದ ಸಮಯದಲ್ಲಿ ಇಡೀ ಆರ್‌ಸಿಬಿ ಕುಟುಂಬವು ನಿಮ್ಮೊಂದಿಗಿದೆ. ಸದೃಢವಾಗಿರಿ ಮಿಯಾನ್” ಎಂದು ಸಿರಾಜ್ ಅವರು ಐಪಿಎಲ್ ಟೂರ್ನಿಯಲ್ಲಿ ಪ್ರತಿನಿಧಿಸುತ್ತಿದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ವೀಟ್ ಮಾಡಿದೆ.

https://twitter.com/RCBTweets/status/1329799247613497346?s=20

 

ಕ್ವಾರಂಟೈನ್ ಪ್ರೋಟೋಕಾಲ್‌ಗಳಿಂದಾಗಿ ಸಿರಾಜ್ ಹೈದರಾಬಾದ್‌ನಲ್ಲಿ ನಡೆಯುವ ತನ್ನ ತಂದೆಯ ಅಂತಿಮ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಲಲು ಹಿಂದಿರುಗುವುದಿಲ್ಲ ಎಂದು ತಿಳಿದುಬಂದಿದೆ.

ಪ್ರಸ್ತುತ 14 ದಿನಗಳ ಕಡ್ಡಾಯ ಕ್ಯಾರೆಂಟೈನ್ ಅವಧಿಯ ಮಧ್ಯದಲ್ಲಿರುವ ಭಾರತೀಯ ತಂಡ, ನವೆಂಬರ್ 13 ರಂದು ದೇಶಕ್ಕೆ ಬಂದ ನಂತರ ಸಿಡ್ನಿ ನಗರದ ಹೊರವಲಯದಲ್ಲಿ ಪ್ರತ್ಯೇಕವಾಗಿ ತರಬೇತಿ ಪಡೆಯುತ್ತಿದೆ.

Advertisement
web