ಪುತ್ತೂರು ತಾಲೂಕಿನ ಹೆಸರಾಂತ ಗಾಯಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಜಗದೀಶ್ ಆಚಾರ್ಯ ಪುತ್ತೂರು ಅವರ ಶ್ರೀ ಆಂಜನೇಯ ಸ್ವಾಮಿ ಸತತ ಭಜನಾ ನಿರತಾ ಭಕ್ತಿಗೀತೆ ವಿಡಿಯೋ ಆಲ್ಬಮ್ ಅಕ್ಟೋಬರ್ 18 ರಂದು ಆಸ್ಟ್ರೇಲಿಯಾದ ಸಿಡ್ನಿಯ ಶ್ರೀ ವೆಂಕಟ ಕೃಷ್ಣ ವೃಂದಾವನ ದಲ್ಲಿ ಬೆಳಗ್ಗೆ ಬಿಡುಗಡೆಗೊಳ್ಳಲಿದೆ.ಜಗದೀಶ್ ಆಚಾರ್ಯ ಪುತ್ತೂರು  ಅವರು ಸ್ವತಃ ನಿರ್ದೇಶನ ಮತ್ತು ಸಂಗೀತ ನಿರ್ದೇಶನ ಮಾಡಿ ಗಾಯನ ಮಾಡಿರುವ ಶ್ರೀ ಆಂಜನೇಯ ಸ್ವಾಮಿ ಸತತ ಭಜನಾ ನಿರತಾ ಭಕ್ತಿಗೀತೆಯು ಶ್ರೀ ವಜ್ರದೇಹಿ ಪ್ರಸಾದ ಧ್ವನಿಸುರುಳಿಯಲ್ಲಿ ಮೂಡಿಬಂದಿದೆ.ಈ ಭಕ್ತಿಗೀತೆಯ ಸಂಪೂರ್ಣ ಚಿತ್ರೀಕರಣವನ್ನು ಕಾರಿಂಜದಲ್ಲಿ ಮಾಡಲಾಗಿದ್ದು,ತುಂಬಾನೆ ಸೊಗಸಾದ ಮೆರುಗನ್ನು ನೀಡಲಾಗಿದೆ. ಈ ಭಕ್ತಿಗೀತೆಯಲ್ಲಿ ರಾಮನ ಪಾತ್ರದಲ್ಲಿ ಬೇಬಿ ಚೈತನ್ಯ ಬಿ ಎನ್ ಉರುವಲು,ಬಾಲ ಹನುಮಂತನಾಗಿ ಲಾಸ್ಯ ಎಕ್ಕೂರು ಮಂಗಳೂರು,ಸೀತೆಯಾಗಿ ನಿಶ್ಮಾ ಎಸ್ ಶೆಟ್ಟಿ ಮಂಗಳೂರು,ಲಕ್ಷ್ಮಣನಾಗಿ ಚುಕ್ಕಿ ವಿಟ್ಲ,ಹನುಮಂತನಾಗಿ ತ್ರಿಶೂಲ್ ಪಿ ಹೆಗ್ಡೆ ಮೂಡು ಬಿದ್ರೆ,ಹಾಗೂ ಪುಟಾಣಿ ಮಕ್ಕಳು ಪಾತ್ರವಹಿಸಿದ್ದಾರೆ.ಛಾಯಾಗ್ರಹಕರಾಗಿ ಅರುಣ್ ರೈ ಮತ್ತು ವಗ್ಗ ನಾಗೇಶ್,ಸಂಕಲನಕರಾಗಿ ಜೆಪಿ ಬಂದ್ಯೋಡ್ ,ವಸ್ತ್ರವಿನ್ಯಾಸ ಕಲೆ ಪ್ರೇಮ್ ರಾಜ್ ಆರ್ಲ ಪದವು ಅವರು ಸಹಕರಿಸಿದ್ದಾರೆ.ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಪ್ರೇಕ್ಷಕರನ್ನು ಸಂಪಾದಿಸಿರುವ ಜಗದೀಶ್ ಆಚಾರ್ಯ ಪುತ್ತೂರು ಅವರ ಹಲವು ವಿಡಿಯೋ ಆಲ್ಬಮ್ ಸಾಂಗ್ ಬಿಡುಗಡೆಯಾಗಿದ್ದು, ನಾಳೆ ಬಿಡುಗಡೆಯಾಗುವ ಭಕ್ತಿಗೀತೆ ವಿಡಿಯೋ ಆಲ್ವಮ್ ಸಾಂಗ್ ಕೇಳುಗರನ್ನು ಇನ್ನಷ್ಟು ಮನರಂಜಿಸಲಿದೆ.

Advertisement

 

 

 

 

Advertisement
web