ದೆಹಲಿ/ರಿಯಾದ್: ಕೊರೊನ ಮಹಾಮಾರಿಯಿಂದಾಗಿ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಧಾನವಾಗಿ ಪ್ರಾರಂಭಗೊಳ್ಳುತ್ತಿದೆ.

Advertisement

ಭಾರತ ದೇಶವು 20 ಕ್ಕೂ ಹೆಚ್ಚು ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದ ಮಾಡಿ ಎರಡು ದೇಶಗಳಿಗೆ ಪ್ರಯಾಣಿಸಲು ಪ್ರಯಾಣಿಕರಿಗೆ ಅನುವುಮಾಡಿಕೊಟ್ಟರೂ, ಇನ್ನು ಸೌದಿ ಅರೇಬಿಯಾ ದೇಶದೊಂದಿಗೆ ಒಪ್ಪಂದ ಆಗಲಿಲ್ಲ ಹಾಗು ಸೌದಿ ಅರೇಬಿಯಾ ದೇಶಕ್ಕೆ ಹೋಗಲು ಭಾರತೀಯ ಪ್ರಯಾಣಿಕರಿಗೆ ಸೌದಿ ಸರಕಾರ ನಿರ್ಬಂಧ ವಿಧಿಸಿದೆ.

ಇದರಿಂದಾಗಿ ಹಲವಾರು ಭಾರತಕ್ಕೆ ಬಂದು ಸೌದಿ ಅರೇಬಿಯಾಗೆ ಹೋಗಲು ಸಾಧ್ಯವಾಗದ ಉದ್ಯೋಗಿಗಳು ನಿರುದ್ಯೋಗದ ಭೀತಿ ಎದುರಿಸುತ್ತಿದ್ದಾರೆ.

ಇದರ ಮಧ್ಯೆ ಸೌದಿಗೆ ಹೋಗಲು ಸಾಧ್ಯವಾಗದೆ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದಾಗಿ ಮನನೊಂದ ಭಾರತ ಮೂಲದ ಉದ್ಯೋಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ.

ಟ್ವಿಟ್ಟರ್‌ನಲ್ಲಿ ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿರುವ ಉದ್ಯೋಗಿ, ” ಭಾರತದಿಂದ ಸೌದಿಗೆ ಯಾವಾಗ ವಿಮಾನ ಸೇವೆ ಪ್ರಾರಂಭವಾಗುತ್ತದೆ ಎಂದು ಗೊತ್ತಿಲ್ಲ, ಬೇರೆ ಎಲ್ಲ ಕಡೆಗೆ ವಿಮಾನ ಸೇವೆ ಇದ್ದರು ಸೌದಿಗೆ ಯಾಕೆ ಇಲ್ಲ? ನಿರುದ್ಯೋಗದಿಂದಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿದೇನೆ, ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿ” ಎಂದು 30 ಸೆಕೆಂಡ್ ವೀಡಿಯೊದಲ್ಲಿ ಹೇಳಿದ್ದಾರೆ.

ಸರಕಾರ ಇನ್ನಾದರೂ ದೊಡ್ಡ ದುರಂತವಾಗುವ ಮೊದಲೇ ಎಚ್ಚೆತ್ತುಕೊಂಡು ಸೌದಿ ಸರಕಾರದ ಜೊತೆ ಒಪ್ಪಂದ ಮದ್ ಭಾರತದಿಂದ ಸೌದಿಗೆ ವಿಮಾನ ಸಂಚಾರ ಪ್ರಾರಂಭಿಸಬೇಕು ಎನ್ನುವುದು ಎಲ್ಲರ ಆಶಯ.

Advertisement
web