ಬಿಜೆಪಿ ಮಹಿಳಾ ಮೋರ್ಚಾ ಪುತ್ತೂರು ನಗರ ಮಂಡಲದ ನೇತೃತ್ವದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ 20 ಹೆಣ್ಣುಮಕ್ಕಳಿಗೆ ಸಮಾಜದ ಸಹೃದಯ ರಿಂದ ಸುಕನ್ಯಾ ಸಮೃದ್ಧಿಯೋಜನೆಯನ್ನು ಕೊಡುಗೆಯಾಗಿ ನೀಡುವ ಕಾರ್ಯಕ್ರಮ “ಏಕಾತ್ಮತಾ ಉತ್ಸವ”ವು ಅಕ್ಟೋಬರ್ 25 ಮಹಾನವಮಿಯ ಪುಣ್ಯದಿನದಂದು ನಡೆಯಿತು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾದ ಈ ಸೇವಾ ಕಾರ್ಯವು ಹೆಣ್ಣುಮಕ್ಕಳಿಗೆ 3 ರೂ. ಲಕ್ಷ ಮೌಲ್ಯದ ಕೊಡುಗೆಯನ್ನು ನೀಡುತ್ತಿದೆ.

Advertisement

ವಾರ್ಡ್ 21, ಬೂತ್ 116 ರ ಸುಭದ್ರಾ ಕಲ್ಯಾಣ ಮಂಟಪ ದಲ್ಲಿ ನಡೆದ ಕಾರ್ಯಕ್ರಮ ದಲ್ಲಿ
ಪುತ್ತೂರಿನ ಮಾನ್ಯ ಶಾಸಕರಾದ ಶ್ರೀ ಸಂಜೀವ ಮಠಂದೂರು, ನಗರ ಮಂಡಲದ ಅಧ್ಯಕ್ಷರಾದ ಪಿ.ಜಿ. ಜಗನ್ನಿವಾಸ ರಾವ್, ನಗರಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಶೆಟ್ಟಿ, ಮಹಿಳಾ ಮೋರ್ಚಾದ ಜಿಲ್ಲಾಪ್ರಧಾನ ಕಾರ್ಯದರ್ಶಿ ತ್ರಿವೇಣಿ ಪೆರುವೋಡಿ, ಮಹಿಳಾ ಮೋರ್ಚ ಜಿಲ್ಲಾ ಕೋಶಾಧಿಕಾರಿ ಹಾಗೂ ಮಾಜಿ ನಗರಸಭಾ ಅಧ್ಯಕ್ಷ ರಾದ ಪ್ರೇಮಲತಾ ರಾವ್, ಮ.ಮೋ. ಪ್ರಭಾರಿ ವಿದ್ಯಾಗೌರಿ, ವಾರ್ಡ್ ನ ನಗರಸಭಾ ಸದಸ್ಯರಾದ ಇಂದಿರಾ ಆಚಾರ್ಯ, ಜಿಲ್ಲಾ ಸಾಮಾಜಿಕಜಾಲತಾಣ ಪ್ರಕೋಷ್ಠದ ಸಹಸಂಚಾಲಕರಾದ ಸಂದೀಪ್ ಲೋಬೊ, ಬೂತ್ ಅಧ್ಯಕ್ಷ ರಾದ ಚಂದ್ರಕಾಂತ, ಮ.ಮೊ.ಅಧ್ಯಕ್ಷ ರಾದ ಶರಾವತೀ ರವಿನಾರಾಯಣ, ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾವತಿ ಮತ್ತು ಜಯಶ್ರೀ ನಾಯಕ್, ಮ.ಮೋರ್ಚ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಫಲಾನುಭವಿ ಮಕ್ಕಳಿಗೆ ಆರತಿ ಬೆಳಗಿ, ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಪುಸ್ತಕ ಹಸ್ತಾಂತರಿಸಲಾಯಿತು.
ಆತ್ಮನಿರ್ಭರ ಭಾರತ ಯೋಜನೆಯ ಕುರಿತು ಮಾಹಿತಿಯನ್ನು ಶ್ರೀ ಸಂದೀಪ್ ಲೋಬೊ ನೀಡಿದರು.
ಸರಕಾರದ ಯೋಜನೆ ಗಳ ಕುರಿತು ಮಾಹಿತಿಯನ್ನು ಶ್ರೀಮತಿ ಪ್ರಭಾವತಿ ನೀಡಿದರು.
ಶ್ರೀಮತಿ ಶರಾವತೀ ಸ್ವಾಗತಿಸಿದರು, ಕಾರ್ಯಕ್ರಮ ದ ನಿರ್ವಹಣೆಯನ್ನು ಶ್ರೀಮತಿ ಜಯಶ್ರೀ ನಾಯಕ್ ಮಾಡಿದರು.
ಏಕಾತ್ಮತಾ ಉತ್ಸವದ ನಿರ್ವಹಣೆಯನ್ನು ಮ.ಮೋ. ಸದಸ್ಯರಾದ ಶ್ರೀಮತಿ ಮನೋರಮಾ ಭಟ್ ಹಾಗೂ ಕಾರ್ಯದರ್ಶಿ ದೀಪಿಕಾ ಪ್ರಕಾಶ್ ನಡೆಸಿಕೊಟ್ಟರು.
ಮ.ಮೋ. ಪದಾಧಿಕಾರಿಗಳಾದ ಸ್ವರ್ಣ ಲತಾ ಭಟ್, ಹೇಮಾವತಿ ಬಲ್ಲಾಳ್, ಇಂದಿರಾ, ಶೋಭಾ ಆಚಾರ್ಯ, ಸುಮತಿ, ಜ್ಯೋತಿ ರವಿದಾಸ್, ಸಂಧ್ಯಾ ಬಾಳಿಗಾ ಕಾರ್ಯಕ್ರಮ ದಲ್ಲಿ ಸಹಕರಿಸಿದರು.
ಮ.ಮೋ ಕಾರ್ಯದರ್ಶಿ ಶ್ರೀಮತಿ ಚೇತನಾ ವಂದಿಸಿದರು.

Advertisement
web