ಕಳೆದ ಒಂದು ವಾರಗಳ ಕಾಲ ನಾವು ವಿವಾದಕ್ಕೊಳಗಾಗಿರುವ ಯುವವಿಜ್ಞಾನಿ ಡ್ರೋನ್ ಪ್ರತಾಪ್ ಅವರ ಜೊತೆಯ ಮಾತುಕತೆಯನ್ನು ‘ಡ್ರೋನಾಯಣ’ ಎನ್ನುವ ಯೂಟ್ಯೂಬ್ ವಿಡಿಯೋ ಸರಣಿಯ ಮೂಲಕ ವೀಕ್ಷಕರ ಮುಂದೆ ಬಿತ್ತರಿಸುವ ಕಾರ್ಯವನ್ನು ಮಾಡಿದ್ದೇವೆ.

Advertisement

ನೂರು ಅಪರಾಧಿಗಳು ಶಿಕ್ಷಿಸಲ್ಪಡದಿದ್ದರೂ ಪರವಾಗಿಲ್ಲ. ಆದರೆ ಒಬ್ಬ ನಿರಪರಾಧಿಗೆ ತಾನು ಮಾಡದ ತಪ್ಪಿಗೆ ಶಿಕ್ಷೆಯಾಗಬಾರದು ಎನ್ನುವ ಮಾತಿದೆ. ಹೀಗಾಗಿ ‘ಡ್ರೋನಾಯಣ’ ಸತ್ಯಶೋಧನಾ ಪ್ರಕ್ರಿಯೆಯೂ ಕೂಡಾ ಹೌದು.

OpIndia ವೆಬ್ ಸೈಟ್  ಡ್ರೋನ್ ಪ್ರತಾಪ್ ಅವರ ಸಾಧನೆಗಳ ಅಸಲಿಯತ್ತೇನು? ಎಂಬುದನ್ನು ಸಾಕ್ಷಿ ಸಮೇತ ಒದಗಿಸಿತ್ತು. ಕೆಲವು ದಿನಗಳ ಕಾಲ ವಾರ್ತಾ ಮಾಧ್ಯಮಗಳಿಗೆ ಇದು ಆಹಾರವಾಗಿತ್ತು. ರಾಷ್ಟ್ರ ಮಟ್ಟದಲ್ಲೇ ಬಹಳ ಚರ್ಚೆಗೀಡಾದ ಸಂಗತಿಯಾಗಿತ್ತು. ಆದರ ನಂತರ ನಡೆದ ನಾಟಕೀಯ(!?) ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದೇವೆ. ಮತ್ತೆ ಅನೇಕ ವಿಷಯಗಳಿಂದಾಗಿ ಡ್ರೋನ್ ಪ್ರತಾಪ್ ವಿಚಾರ ಮರೆಗೆ ಸರಿಯಿತು.

ಯಾರೇ ಒಬ್ಬ ಆರೋಪಿ ಎಂದು ಸಾಬೀತಾದ ಕೂಡಲೇ ಅವರಿಗೂ ಹೇಳಲು ವಿಷಯಗಳಿರುತ್ತವೆ. ಅದನ್ನು ಮುಕ್ತವಾಗಿ ಹೇಳಿಕೊಳ್ಳುವ ಮಾಧ್ಯಮವನ್ನು ಕಲ್ಪಿಸುವುದು ನಮ್ಮ ಉದ್ದೇಶವಾಗಿತ್ತು. ಇದಲ್ಲದೇ ಪ್ರತಾಪ್ ಅವರನ್ನು ಉದಾಹರಣೆಯಾಗಿ, ಮಾದರಿಯಾಗಿ ತೆಗೆದುಕೊಂಡ ಅದೆಷ್ಟೋ ಮನಸ್ಸುಗಳಿಗೆ ಈ ಸುದ್ದಿ ಘಾಸಿಯನ್ನುಂಟು ಮಾಡುವಂಥದ್ದೇ. ಇದಕ್ಕೆಲ್ಲಾ ಮೂಕಪ್ರೇಕ್ಷಕರಾಗಿ ಸಾಕ್ಷಿಯಾಗುತ್ತಿರುವ ಅನೇಕರ ಮನದಲ್ಲಿ ಪ್ರಶ್ನೆಗಳೇಳುವುದು ಸಹಜವೇ. ಅದೆಲ್ಲದಕ್ಕೂ ಪ್ರತಾಪ್ ಅವರದೇ ಬಾಯಿಯಿಂದ ಉತ್ತರಗಳನ್ನು ಹೇಳಿಸುವ ಪ್ರಯತ್ನ ನಮ್ಮದಾಗಿತ್ತು. ನಮ್ಮೊಂದಿಗಿನ ಮಾತುಕತೆ ಸಂದರ್ಭದಲ್ಲಿ ಅವರು ತಮ್ಮ ಆಳಲುಗಳನ್ನು, ಆದ ನಷ್ಟಗಳನ್ನು ತೋಡಿಕೊಂಡರು.

ಅದಾಗ್ಯೂ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರಕದೆ ಹಾಗೇ ಬಾಕಿ ಉಳಿದಿದೆ. ಅನೇಕರು ವಿಡಿಯೋಗೆ ಕಮೆಂಟ್ ಮೂಲಕ ತಿಳಿಸಿದಂತೆ ಪ್ರತಾಪ್ ಅವರು ಸರಿಯಾದ ಸ್ಪಷ್ಟೀಕರಣವನ್ನು ನೀಡುತ್ತಿಲ್ಲ. ಅವರದ್ದೇ ಕ್ಷೇತ್ರವಾದ ಡ್ರೋನ್ ತಂತ್ರಜ್ಞಾನದ ಬಗ್ಗೆ ಪ್ರಶ್ನೆಗಳೇಳುವಾಗ ತಬ್ಬಿಬ್ಬಾಗುವುದು ಯಾಕೆ!? ಸಾಕ್ಷ್ಯಾಧಾರಗಳನ್ನು ಪ್ರಸ್ತುತಪಡಿಸುತ್ತೇನೆಂದರೂ ಯಾಕೆ ಇನ್ನೂ ಅಜ್ಞಾತವಾಗಿ ಉಳಿಯುತ್ತಿದ್ದಾರೆ. ಇದೆಲ್ಲದ್ದಕ್ಕೂ ಪ್ರತಾಪ್ ಅವರೇ ಉತ್ತರ ನೀಡಬೇಕು. ಬಹುಷಃ ಅವರು ಸೂಕ್ತ ಸಮಯಕ್ಕಾಗಿ ಎದುರುನೋಡುತ್ತಿದ್ದಾರೇನೋ!? ಪ್ರೇಕ್ಷಕರ ಮನದಲ್ಲಿ ಭುಗಿಲೆದ್ದಿರುವ ಪ್ರಶ್ನೆಗಳಿಗೆ ಸಮರ್ಪಕವಾದ ಅಂತಿಮ ಉತ್ತರ ನೀಡಲು ನಮಗೆ ಅಸಾಧ್ಯ. ಕಾರಣ ಪ್ರತಾಪ್ ಅವರು ಇನ್ನೊಂದು ಸಂದರ್ಶನಕ್ಕೆ ತಯಾರಿಲ್ಲ.

ಜನರನ್ನು ಮೋಸ ಮಾಡುವುದು ಸುಲಭ. ಆದರೆ ಸುಳ್ಳಿನ ಜಾಲಗಳು ಹೊರಬರಲು ದೀರ್ಘಕಾಲ ತೆಗೆದುಕೊಳ್ಳುವುದಿಲ್ಲ. ಆಗ ಮೋಸ ಹೋದವರಿಗಿಂತ ಅಪಾಯಕಾರಿ ಯಾರೂ ಇರುವುದಿಲ್ಲ.
ಪ್ರತಾಪ್ ಅವರ ಸ್ಪಷ್ಟೀಕರಣ, ಅವರು ಅನುಭವಿಸಿದ ಮಾನಸಿಕ ಸಂಘರ್ಷವನ್ನು ಅವರದೇ ಧ್ವನಿಯಲ್ಲಿ ವೀಕ್ಷಕರಿಗೆ ಕೇಳಿಸಿದ್ದೇವೆ. ವಿವಿಧ ಕಂತುಗಳಲ್ಲಿ ಮೂಡಿಬಂದ ‘ಡ್ರೋನಾಯಣ’ ನೂರಾರು ಪ್ರೇಕ್ಷಕರಿಗೆ ತಲುಪಿದೆ‌. ಪ್ರತಾಪ್ ಅವರು ನಿರಪರಾಧಿಯಾಗಿದ್ದರೆ ಅವರ ಸಾಧನೆಗಳು ಪ್ರಶಂಸನಾರ್ಹ. ಆದರೆ ಅಪರಾಧ ಸಾಬೀತಾದಾರೆ ಕಾನೂನು ಶಿಕ್ಷೆ ಆಗಲೇಬೇಕು. ನಮ್ಮ ಈ ಕಾರ್ಯವು ವೀಕ್ಷಕರಿಗೆ ತಲುಪಿದೆ ಎಂಬ ಭಾವನೆ ನಮಗಿದೆ. ಪ್ರತಾಪ್ ಅವರು ಮೌನಮುರಿದು ಸಾಕ್ಷಿ ಸಮೇತ ಜನರೆದುರು ಪ್ರತ್ಯಕ್ಷವಾಗುತ್ತಾರೋ ಅಥವಾ ತಾವು ಮಾಡಿದ ಸಾಧನೆಗಳೆಲ್ಲವೂ ಸುಳ್ಳು ಎಂದು ಹೇಳುತ್ತಾರೋ… ಕಾದು ನೋಡಬೇಕಿದೆ.
ಈ ಒಂದು ಮುಕ್ತಾಯದೊಂದಿಗೆ ‘ಡ್ರೋನಾಯಣ’ ಸರಣಿಯನ್ನು ಕೊನೆಗೊಳಿಸುತ್ತಿದ್ದೇವೆ.

ವೀಡೀಯೋ ಸೆಪ್ಟೆಂಬರ್ 14 ರಾತ್ರಿ 9.15ಕ್ಕೆ ಪ್ರೀಮಿಯರ್ ಆಗಲಿದೆ.


Advertisement:
jyo

Advertisement
web