ಸಣ್ಣ ಸಣ್ಣ, ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆ ಮಾಡಿದ ಸುದ್ದಿ ಈಗೀಗ ಬಹಳ ಸಾಮಾನ್ಯವಾಗಿದೆ! ಇದೊಂದು ದುರಂತ, ಸಾಮಾಜಿಕ ಪಿಡುಗು ಆಗಿದೆ. ಆತ್ಮಹತ್ಯೆ ಎಂದರೆ ತನ್ನನ್ನು ತಾನೇ ಕೊಂದು ಕೊಳ್ಳುವುದು.ಇದೊಂದು ಅಪರಾಧವಾಗಿದೆ.ಆತ್ಮಹತ್ಯೆ ಮಹಾ ಪಾಪ. ಯಾವ ಕಷ್ಟ, ದುಃಖದ ಕಾರಣದಿಂದ ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಅವರು ಪುನಃ ಜನ್ಮ ತಾಳಿ ಅದೇ ಕಷ್ಟ ದುಃಖಗಳನ್ನು ಅನುಭವಿಸುತ್ತಾರೆ ಎಂದು ಜ್ಞಾನಿಗಳು ಹೇಳಿದ್ದಾರೆ.’ಮಾನವ ಜನ್ಮ ಬಲು ದೊಡ್ಡದು,ಅದನು ಹಾಳು ಮಾಡದಿರಿ ಹುಚ್ಚಪ್ಪಗಳಿರಾ ‘, ಎಂದು ಪುರಂದರ ದಾಸರು ಹೇಳಿದ್ದಾರೆ.ಈ ದಾಸವಾಣಿಯಲ್ಲಿ ಮನುಷ್ಯ ಜನ್ಮದ ಹಿರಿಮೆ ಗರಿಮೆಗಳನ್ನು ಸ್ಪಷ್ಟಪಡಿಸಲಾಗಿದೆ.ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು, ವಿಶಿಷ್ಟ ದರ್ಜೆ (ಡಿಸ್ಟಿಂಕ್ಷನ್) ಸಿಗಲಿಲ್ಲ, ಮೆಡಿಕಲ್, ಇಂಜಿನಿಯರಿಂಗ್ ಸೀಟು ಸಿಗಲಿಲ್ಲ, ಕಲಿತ ವಿದ್ಯೆಗೆ ತಕ್ಕ ಉದ್ಯೋಗ ಸಿಗದಿರುವಿಕೆ, ಪ್ರೀತಿಸಿದ ಯುವಕ ಕೈಕೊಟ್ಟ , ಪ್ರೀತಿಸಿದ ತರುಣಿ ಬೇರೊಬ್ಬನ ಹಿಂದೆ ಹೋದಳು, ವ್ಯಾಪಾರ ಕೈ ಹಿಡಿಯಲಿಲ್ಲ, ಕೃಷಿಗೆ ಸುರಿದ ಹಣ ಬೆಳೆ ನಾಶದಿಂದ ಕೈಗೆ ಬರಲಿಲ್ಲ, ಹೆತ್ತವರು ಮೊಬೈಲು ಕೊಡಿಸಲಿಲ್ಲ, ಮೊಬೈಲಿಲ್ಲಿ ಹೆಚ್ಚು ಆಡದಿರು, ಪಾಠ ಓದು ಎಂದು ಮನೆಯವರು ಗದರಿಸಿದ್ದಕ್ಕೆ.. ಹೀಗೆ ನಾನಾ ಕಾರಣಗಳಿಂದ ಆತ್ಮಹತ್ಯೆ ಸಮಾಜದಲ್ಲಿ ನಿತ್ಯ ನಿರಂತರ ನಡೆಯುತ್ತಿರುವುದು ಆಘಾತಕಾರಿ ವಿದ್ಯಮಾನವಾಗಿದೆ.ನಾಳಿನ ಪ್ರಜೆಗಳಾದ ಯುವಜನಾಂಗ ಆತ್ಮಹತ್ಯೆ ಮಾಡಿದರೆ ಕುಟುಂಬ, ಸಮಾಜ, ಹಾಗೂ ದೇಶಕ್ಕೆ ದೊಡ್ಡ ನಷ್ಟ.ಹೆತ್ತವರು ಬದುಕಿನ ಕೊನೆಯವರೆಗೆ ಕೊರಗಿ ನರಳಿ ಕರಗುವ ಪರಿಸ್ಥಿತಿ ಚಿಂತಾಜನಕ.ಆತ್ಮಹತ್ಯೆಗೆ ಕಾರಣ ಆತ್ಮವಿಶ್ವಾಸವಿಲ್ಲದಿರುವುದು ಹಾಗೂ ಪರಿಸ್ಥಿತಿಯನ್ನು ಎದುರಿಸುವ ಎದೆಗಾರಿಕೆ ಇಲ್ಲದಿರುವುದು.ಸಿಟ್ಟಿನ ದುಃಖದ ಕೈಗಳಿಗೆ ಬುದ್ಧಿಯನ್ನು ಕೊಡಬಾರದು. ಈ ಪ್ರವೃತ್ತಿ ಒಂದು ಮನಸ್ಸಿನ ದುರ್ಬಲತೆಯಿಂದ ಉಂಟಾಗುವುದು. ಆತ್ಮಹತ್ಯೆ ಮಾಡಬೇಕೆಂಬ ಯೋಚನೆ ಮಾಡಿದವರು ನೂರು ಬಾರಿ ಯೋಚಿಸಬೇಕು.ಇಂದಿನ ಕಷ್ಟ, ಸಮಸ್ಯೆ, ದುಃಖ ನಾಳೆಗೆ ಇರಲಾರದು ಎಂದು ತಿಳಿಯಬೇಕು. ಇಂತಹ ದುರ್ಬಲ ಮನಃಸ್ಥಿತಿ ಉಳ್ಳವರು ಮಾನಸಿಕ ತಜ್ಞರ ಸಲಹೆ ಪಡೆಯಬೇಕು. ಬದುಕಿನಲ್ಲಿ ತೀರಾ ನಿರಾಶೆ ಹೊಂದಿದವರಿಗೆ ಕೌನ್ಸೆಲಿಂಗ್ ಕೊಡಿಸಬೇಕು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಮರು ಪರೀಕ್ಷೆಗೆ ಪ್ರಯತ್ನಿಸಬಹುದು. ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮಾತ್ರ ಯಶಸ್ವೀ ಬದುಕಿಗೆ ಕಾರಣವಲ್ಲ ಎಂಬ ಮಾತಿಗೆ ಅನೇಕ ನಿದರ್ಶನಗಳಿವೆ. ಮೆಡಿಕಲ್, ಇಂಜಿನಿಯರಿಂಗ್ ಸೀಟಿಗಾಗಿ ಮರಳಿ ಯತ್ನಿಸ ಬಹುದು. ಅಥವಾ ಮತ್ತೂ ಸೀಟು ಸಿಗದಿದ್ದರೆ ಉದ್ಯೋಗಾವಕಾಶ ವಿಫುಲವಾಗಿರುವ ಬೇರೆ ಶಿಕ್ಷಣ ಪಡೆಯ ಬಹುದು. ಸರಕಾರಿ ಹುದ್ದೆ ಸಿಗದಿದ್ದರೆ ಸ್ವೋದ್ಯೋಗ ಮಾಡಬಹುದು. ಕೃಷಿ, ವ್ಯಾಪಾರ ಕ್ಷೇತ್ರಗಳಲ್ಲಿ ನಷ್ಟವಾಯಿತೆಂದು ಹೆದರದೆ ಪುನಃ ಇದರಲ್ಲಿ ತೊಡಗಿ ಬದುಕು ಒಂದು ಹೋರಾಟ ಎಂದು ತಿಳಿಯಬೇಕು.ಪ್ರೀತಿಸಿದ ತರುಣ, ತರುಣಿ ಕೈ ಕೊಟ್ಟರು ಎಂದು ಆವೇಶಕ್ಕೊಳಗಾಗಿ ಆತ್ಮಹತ್ಯೆ ಮಾಡುವುದು ಹೇಡಿತನ.ಗಂಡಿಗೊಂದು ಹೆಣ್ಣು, ಹೆಣ್ಣಿಗೊಂದು ಗಂಡು ಇದ್ದೇ ಇದೆ.’ಸೋಲೇ ಗೆಲುವಿನ ಸೋಪಾನ’, ಎಂಬ ಮಾತನ್ನು ನಿಜಗೊಳಿಸಬೇಕು. ಎಡಿಸನ್ ಒಂದು ಯಶಸ್ವೀ ವಿದ್ಯುತ್ ಬಲ್ಬನ್ನು ಕಂಡು ಹಿಡಿಯುವ ಮೊದಲು ಇಪ್ಪತ್ತೈದು ಪ್ರಯೋಗಗಳಲ್ಲಿ ಸೋಲು ಕಂಡಿದ್ದ.ಇಪ್ಪತ್ತಾರನೇ ಪ್ರಯತ್ನದಲ್ಲಿ ಯಶಸ್ವಿಯಾದ!ಇದು ಎಲ್ಲರಿಗೆ ಒಂದು ಮಾದರಿ.. ಬದುಕು ಸುಖ-ದುಃಖ, ಸೋಲು-ಗೆಲುವು, ಏಳು – ಬೀಳುಗಳ ಬೇವು-ಬೆಲ್ಲ ಗಳ ಸಮರಸ ಎಂದು ತಿಳಿದರೆ ಆತ್ಮಹತ್ಯೆಯ ಪಿಡುಗು ಇಲ್ಲವಾದೀತು.*ಆತ್ಮ ಹತ್ಯೆ ಯಾವತ್ತೂ ಸಲ್ಲದು *ಎಂತಹ ಕಷ್ಟ ಬಂದರೂ ಎದುರಿಸುವುದುಮಾನವ ಜನ್ಮವು, ದುರ್ಲಭವಾಗಿದೆ ದುಃಖ ಬಂದಾಗ ಕಲ್ಲಾಗ ಬೇಕು, ಎದೆ*

Advertisement

*ಬರಹ: ಗುಣಾಜೆ ರಾಮಚಂದ್ರ ಭಟ್*

Advertisement
web