ಪರಂಪರೆಯಿಂದಲೂ ಸಡಗರದಿಂದ ಆಚರಿಸಿಕೊಂಡು ಬರುವ ಹಬ್ಬ, ನಮ್ಮ ದೇಶದ ಅತ್ಯಂತ ಅರ್ಥಪೂರ್ಣ ವಾಗಿರುವ ದಸರಾ ಹಬ್ಬ….. ಎಲ್ಲರು ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬ.. ಕೊರೊನ ಎಂಬ ಮಹಾಮಾಯೆಯಿಂದ ಮಂಕಾಗಿರುವ ಜನರ ಮುಖದಲ್ಲಿ ಮಂದಹಾಸವನ್ನು ಬೆಳಗಿಸುವ ಹಬ್ಬ …. ದಸರಾ ಎಂದರೆ ಒಂಬತ್ತು ದಿನಗಳ ಕಾಲ ಪೂಜಾ ಪುರಸ್ಕಾರಗಳು ನಡೆಯುತ್ತದೆ. ನವರಾತ್ರಿಯ ಸಮಯ ದಂದು ದೇವಸ್ಥಾನ ಗಳಿಗೆ ಹೋಗುವುದೆಂದರೆ ಏನೊಂಥರ ಸಂತೋಷ…. ದಾರಿಗಳ ಉದ್ದಕ್ಕೂ ಸಂತೆಗಳು, ರಸ್ತೆಯೆಲ್ಲ ವಿದ್ಯುತ್ ಬೆಳಕಿನಿಂದ ಶ್ರoಗಾರವಾಗಿರುತ್ತದೆ… ನಗರವು ಬೆಳಕಿನಿಂದ ಪ್ರಜ್ವಲಿಸುತ್ತದೆ.. ಎಲ್ಲರನ್ನೂ ಒಮ್ಮೆ ಕಣ್ಣು ಮಿಟುಕಿಸುವಂತೆ ಅಲಂಕಾರಗೊಂಡಿರುವ ದೇವಸ್ಥಾನಗಳು, ಸರದಿ ಸಾಲಿನಲ್ಲಿ ನಿಂತಿರುವ ಜನಗಳು ಇವೆಲ್ಲವನ್ನು ನೋಡಲು ರೋಮಂಚನವಾಗುತ್ತದೆ…. ದಸರಾ ವನ್ನು ನವರಾತ್ರಿ ಎಂದು ಹೇಳುತ್ತಾರೆ…. ನವರಾತ್ರಿ ಸಮಯದಂದು ದೇವಾಲಯಗಳಲ್ಲಿ ವಿಶೇಷ ಪೂಜೆಗಳು… ಅದರಲ್ಲಿಯೂ ಮೈಸೂರು ದಸರಾ ನೋಡುವುದೆಂದರೆ ಎಲ್ಲರಿಗು ಅಚ್ಚುಮೆಚ್ಚು… ಅಲಂಕಾರಗೊಂಡಿರುವ ಆನೆಗಳ ಮೇಲೆ ಜಂಬೂ ಸವಾರಿ, ಗೊಂಬೆಗಳ ಮೆರವಣಿಗೆ, ಕಾರ್ಯಕ್ರಮಗಳ ಸುರಿಮಾಲೆ ಇವೆಲ್ಲವೂ ನಮ್ಮ ನಾಡಹಬ್ಬ ದಸರಾ ಹಬ್ಬದಲ್ಲಿ ಇರುತ್ತದೆ.. ಎಲ್ಲದಕ್ಕೂ ಮಿಗಿಲಾಗಿ ನಾಡಹಬ್ಬದಲ್ಲಿ ನಮ್ಮ ಕಲೆ -ಸಂಸ್ಕೃತಿಗಳು ಕಾಣುತ್ತದೆ.. ದಸರಾ ಎಂದರೆ ಮೊದಲಿಗೆ ಕಣ್ಣಮುಂದೆ ಕಾಣುವುದು ಬಣ್ಣ ಬಣ್ಣದ ಚುಕ್ಕೆಯಿಂದ ಕಂಗೊಳಿಸುವಂತಹ ಹುಲಿ ವೇಷಗಳು…. ತಾಳಕ್ಕೆ ತಕ್ಕಂತೆ ಕುಣಿಯುವ ಹುಲಿವೇಷಗಳ ಶಬ್ದ ಎಲ್ಲಿಂದಲೋ ಒಂದು ದಿಕ್ಕಿನಿಂದ ಸ್ವಲ್ಪ ಕೇಳಿಸಿಕೊಂಡರೆ ಸಾಕು… ಮನೆಯೊಳಗೆ ಇದ್ದವರು ಓಡಿ ಕೊಂಡು ಬಂದು ಅದನ್ನು ನೋಡಿ ಕಣ್ಣುತುಂಬಿಕೊಳ್ಳುತ್ತಾರೆ…. ಪಟ್ಟಣಗಳಲ್ಲಿ ಬಣ್ಣದಿಂದ ವೇಷ ಗಳನ್ನು ಹಾಕಿಕೊಂಡು ಬಂದು ಕುಣಿದು ಕುಪ್ಪಳಿಸುತ್ತಾರೆ.. ಹಳ್ಳಿಗಳಲ್ಲಿ ಮುಖಕ್ಕೆ ಮಾತ್ರ ಬಣ್ಣ ಹಚ್ಚಿಕೊಂಡು, ದೇಹಕ್ಕೆ ರಂಗಾದ ಬಟ್ಟೆಯನ್ನು ಹಾಕಿಕೊಂಡು ಮನೆಯ ಮುಂದೆ ನಿಂತು ಅವರು ಹೇಳುವ ವಾಕ್ಯವನ್ನು ಕೇಳಲು ಇಂಪಾಗಿ ಇರುತ್ತೆ…….. ಒಟ್ಟಾಗಿ ದಸರಾ ಹಬ್ಬ ಎಂದರೆ ನಮ್ಮ ದೇಶದ ಕಲೆ ಸಂಸ್ಕೃತಿಗಳನ್ನು ವಿದೇಶಕ್ಕೆ ತೋರುವ ನಾಡ ಹಬ್ಬ…ಬರಹ: ರಚನಾ. ಕೆ. ವಿಶ್ವವಿದ್ಯಾನಿಲಯ ಕಾಲೇಜ್ ಮಂಗಳೂರು (ಪತ್ರಿಕೋದ್ಯಮ )

Advertisement
Advertisement
web