ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಡಾ. ಕೆ ವಿ ರಾಜೇಂದ್ರ ಅವರಿಗೆ ಕೋವಿಡ್ ಸೋಂಕು ಇರುವುದು ಅಕ್ಟೋಬರ್ 13 ರಂದು ಧೃಡಪಟ್ಟಿದೆ. ಸದ್ಯ ಇವರು ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿದ್ದಾರೆ.
Advertisement
ಈಗಾಗಲೇ ಜಿಲ್ಲಾಧಿಕಾರಿ ಕೋರೋನಾ ರೋಗ ಲಕ್ಷಣಗಳು ಕಂಡುಬಂದಿಲ್ಲ ಹಾಗೂ ಇವರ ಮನೆಯವರು ಕೋವಿಡ್ ಪರೀಕ್ಷೆ ಮಾಡಿಸಿದ್ದು, ಕೊರೋನಾ ಸೋಂಕು ಇರುವುದು ಖಚಿತಗೊಂಡಿದ್ದು ಅವರು ಸಹ ಹೋಂ ಕ್ವಾರಂಟೈನ್ ಅಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.