ಜಾಗತಿಕವಾಗಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಈಗಾಗಲೇ 3.3 ಕೋಟಿಗಳಿಗೂ ಅಧಿಕ ಪ್ರಕರಣಗಳು ದಾಖಲಾಗಿದೆ. ಜೊತೆಗೆ ಕೊರೊನಾ ಸೋಂಕಿನಿಂದಾಗಿ ಜಾಗತಿಕವಾಗಿ ಹತ್ತು ಲಕ್ಷಕ್ಕೂ ಅಧಿಕ ಸಾವು ಸಂಭವಿಸಿದೆ.ಹಲವು ದೇಶಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಕುರಿತು ಎಚ್ಚರ ವಹಿಸಬೇಕಾಗಿದೆ.

Advertisement

ಈ ಕುರಿತು ರಾಯಿಟರ್ಸ್ ವರದಿ ನೀಡಿದ್ದು ಜಾಗತಿಕವಾಗಿ ಕೋವಿಡ್ ಸಾಂಕ್ರಾಮಿಕಕ್ಕೆ 10 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದು, ಹಲವಾರು ದೇಶಗಳಲ್ಲಿ ಸೋಂಕುಗಳು ಮತ್ತೆ ಹೆಚ್ಚಾಗುವುದರಿಂದ ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಕೋವಿಡ್ 19 ನಿಂದಾಗಿ ಸಾವು ಸಂಖ್ಯೆ ಕೆಲವೇ ತಿಂಗಳುಗಳಲ್ಲಿ ದ್ವಿಗುಣಗೊಂಡಿದ್ದು,ಇದು ಅಮೆರಿಕಾ, ಬ್ರೆಜಿಲ್ ಮತ್ತು ಭಾರತದಲ್ಲಿ ಸಂಭವಿಸಿದ ಸಾವುಗಳ ಪ್ರಮಾಣದ ಹೆಚ್ಚಳದಿಂದಾಗಿ ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.ಅಮೆರಿಕಾ,ಬ್ರೆಜಿಲ್ ಮತ್ತು ಭಾರತದಲ್ಲಿನ ಕೊರೊನಾದಿಂದ ಸಾವಿನ ಸಂಖ್ಯೆಯು ಜಾಗತಿಕ ಕೊರೊನಾ ಸಾವಿನ ಶೇಕಡಾ 45 ಎಂದು ಅಂದಾಜಿಸಲಾಗಿದೆ.

ಅಮೆರಿಕಾದಲ್ಲಿ ಕೊರೊನಾದಿಂದಾಗಿ ಒಟ್ಟು 2 ಲಕ್ಷಕ್ಕೂ ಅಧಿಕ ಜನರು ಸಾವನಪ್ಪಿದ್ದು ಭಾರತದಲ್ಲಿ 96 ಸಾವಿರಕ್ಕೂ ಅಧಿಕ ಸಾವು ಸಂಭವಿಸಿದೆ.
Advertisement:
ak

Advertisement
web