ಯಾರು ಅರಿಯಬಲ್ಲರು ನಿನ್ನ
ಅಂತರಂಗದ ಭಾವನೆಯ,
ಹಪಹಪಿಸುತಿದೆ ನಿನ್ನ ಮನವು
ತಿಳಿಯಪಡಿಸಬೇಕು ಎಲ್ಲರಿಗೆಂದು ,
ಮೂಕಳಾಗಿರುವೆ ನೀನು ಎಲ್ಲವನ್ನೂ ಸಹಿಸಿಕೊಂಡು
ಹೃದಯಾಂತರಾಳದಿ ನೀನು ಬಹುಮೇಲು…
ಮಾಡುತಿಹರು ನಿನ್ನ ಒಡಲಾಳವ ಬರಿದು,
ಧನಲಕ್ಷ್ಮಿಯು ಒಲಿದು ಬರಲು
ಮದವೇರುತಿಹುದು ನರಮಾನವನಿಗೆ,
ನಾಶಗೊಳಿಸುತಿಹರು ಸ್ವಾರ್ಥಮನದಿ
ನಿನ್ನೀ ನಿಸ್ವಾರ್ಥ ಮನದಂಗಳವ,
ಸಮಸ್ತರಿಗೂ ನನ್ನೀ ಕಳಕಳಿಯ ವಿನಂತಿ
ಹಾಳುಗೆಡಿಸಬೇಡಿ ನಳನಳಿಸುವ ಈ ಭುವಿಯ.

Advertisement

ಬರಹ – ಚೈತ್ರಾ ರೈ ಪಿ ಡಿ
ಪಿಜಕ್ಕಳ.

Advertisement
web