ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ದೇವಾಲಯವು ಸರೋವರ ದೇವಾಲಯ ಎಂದು ಪ್ರಸಿದ್ಧಿ ಪಡೆದಿದೆ.ದೇವಾಲಯದ ಸುತ್ತಲೂ ನೀರು ಇರುವುದರಿಂದ ಮತ್ತು ಕೊಳದ ಮಧ್ಯದಲ್ಲಿ ದೇವಾಲಯ ನಿರ್ಮಿತವಾಗಿರುವುದರಿಂದ ಸರೋವರ ಕ್ಷೇತ್ರ ಎಂದು ಕರೆಯುತ್ತಾರೆ.ಇದು ತಿರುವನಂತಪುರ ಅನಂತ ಪದ್ಮನಾಭ ದೇಗುಲದ ಆದಿ ಎಂಬುದು ಜನ ಮಾನಸದಲ್ಲಿರುವ ನಂಬಿಕೆ.

Advertisement

ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ಸಸ್ಯಾಹಾರಿ ಮೊಸಳೆ.ಬಬಿಯಾ ಎಂಬ ಹೆಸರಿನ ಮೊಸಳೆ ಇದಾಗಿದ್ದು ಪದ್ಮನಾಭ ದೇವರಿಗೆ ನಮ್ಮ ಪ್ರಾರ್ಥನೆಯನ್ನು ತಲುಪಿಸಲು ದೇವರಿಂದ ಪ್ರತ್ಯಕ್ಷವಾದ ದೇವದೂತ ಎಂದು ಬಲ್ಲವರು ಹೇಳುತ್ತಾರೆ.

ಹೇಗೆ ಧರ್ಮಸ್ಥಳದಲ್ಲಿ ಅಣ್ಣಪ್ಪನಿದ್ದಾನೋ,ಕೊಲ್ಲೂರಲ್ಲಿ ವೀರಭದ್ರನಿದ್ದಾನೋ ಅಂತೆಯೇ ಅನಂತಪುರದಲ್ಲಿ ಬಬಿಯಾ ಎಂಬುದು ಹಿರಿಯರ ಮಾತು.

ಈ ಮೊಸಳೆ ಸಸ್ಯಾಹಾರಿಯಾಗಿದ್ದು,ದೇವರಿಗೆ ನೀಡಿದ ಪ್ರಸಾದವನ್ನಷ್ಟೇ ತಿನ್ನುವುದು.

ಭಕ್ತ ಜನರು ತಮ್ಮ ಇಷ್ಟಾರ್ಥಗಳನ್ನು ಇಲ್ಲಿ ಪ್ರಾರ್ಥಿಸುವುದರಿಂದ ನೆರವೇರುತ್ತದೆ.ಮಕ್ಕಳಾಗದವರಿಗೆ ಮಕ್ಕಳು,ಮದುವೆಯಾಗದವರಿಗೆ ಮದುವೆ ಹೀಗೆ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.

ಈ ಬಬಿಯಾ ಳ ಕುರಿತು ಹಲವು ಕಥೆಗಳಿದ್ದು ಹಿಂದೊಮ್ಮೆ ಒಬ್ಬ ನಿರಪರಾಧಿ ಒಂದು ಪ್ರಕರಣಗಳಲ್ಲಿ ಬಂಧಿತರಾಗಿದ್ದರು.ಅವರ ಸಂಬಂಧಿಕರು ಇಲ್ಲಿ ಬಂದು ಪ್ರಾರ್ಥಿಸಿದ್ದರು,ನಂತರ ಬಬಿಯಾ ಅವರನ್ನು  ಬಿಡುಗಡೆಗೊಳಿಸಿತು ಎಂದು ಹೇಳುತ್ತಾರೆ.ಇದು ಬಬಿಯಾಳ ಶಕ್ತಿಯನ್ನು  ಹೇಳುತ್ತದೆ.

ಹಿಂದೆ 1942ರಲ್ಲಿ ಬ್ರಿಟಿಷ್ ಯೋಧನೊಬ್ಬ ಈ ಕೊಳದಲ್ಲಿದ್ದ ಮೊಸಳೆಯನ್ನು ಗುಂಡಿಟ್ಟು ಕೊಂಡಿದ್ದ,ನಂತರ ಕೆಲವೇ ದಿನಗಳಲ್ಲಿ ಇನ್ನೊಂದು ಮೊಸಳೆ ಪ್ರತ್ಯಕ್ಷವಾಗಿತ್ತಂತೆ.
ಹೀಗೆ ಹಲವು ವರ್ಷಗಳಿಂದ ಭಕ್ತರ ಸಕಲ ಇಷ್ಟಾರ್ಥ ಗಳನ್ನು ದೇವರ ಬಳಿಗೆ ಮುಟ್ಟಿಸುವ ಕಾರ್ಯದಲ್ಲಿ ಬಬಿಯಾ ನಿರತವಾಗಿದೆ ಎಂಬುದು ಜನರ ನಂಬಿಕೆ.

ಬರಹ: ಯಜ್ಞೇಶ್ ಆಚಾರ್ಯ

Advertisement
web