ಮಂಗಳೂರು: ಕೋವಿಡ್ 19 ನಿಂದಾಗಿ ಸ್ಥಗಿತಗೊಂಡಿದ ವಿಮಾನಯಾನ ಇದೀಗ ಮತ್ತೆ ಆರಂಭವಾಗಲಿದೆ. ಮಂಗಳೂರಿನ ವಿಮಾನ ನಿಲ್ದಾಣದಿಂದ ಮುಂಬೈಗೆ ವಿಮಾನ ಸೇವೆಯು ಅಕ್ಟೋಬರ್ ‌12 ರಿಂದ ಪ್ರಾರಂಭಿಸಿಲು ಏರ್ ಇಂಡಿಯಾ ಸಂಸ್ಥೆ ಪ್ರಕಟಣೆ ಹೊರಡಿಸಿದೆ.

Advertisement

ಈಗಾಗಲೇ ವಿಮಾನ ಸೇವೆಯು ಆರಂಭಗೊಳ್ಳುವ ದಿನಾಂಕ‌ ನಿಗದಿಯಾಗಿದ್ದು ವಿಮಾನ ಹಾರಾಡುವ ಸಮಯದ ವಿವರ ಹೀಗಿದೆ:

ವಿಮಾನ ಸೇವೆಯು ವಾರದ ನಾಲ್ಕು ದಿನ ಮಾತ್ರ ಲಭ್ಯಗೊಳ್ಳಲಿದ್ದು, ಸೋಮವಾರ,ಬುಧವಾರ, ಶುಕ್ರವಾರ, ಭಾನುವಾರದಂದು ಲಭ್ಯವಿದೆ ಎಂಬ ಮಾಹಿತಿ ದೊರಕಿದೆ.

ಈ ವಿಮಾನವು ಮುಂಬೈನಿಂದ ಬೆಳಗ್ಗೆ 10:15 ಕ್ಕೆ ಹೊರಟು ಸಮಯ ಮಧ್ಯಾಹ್ನ 12:00 ಗಂಟೆಗೆ ಸರಿಯಾಗಿ ಮಂಗಳೂರು ತಲುಪಲಿದೆ.

ನಂತರ ಅದೇ ಮಾರ್ಗವಾಗಿ ವಿಮಾನಯಾನವು ಮಂಗಳೂರಿನಿಂದ ಸುಮಾರು‌12:40 ಕ್ಕೆ ಹೊರಟು ಮಧ್ಯಾಹ್ನ 2:20 ರ ವೇಳೆ ಮುಂಬೈಗೆ ಬಂದು ಇಳಿಯಲಿದೆ ಎಂದು ಏರ್ ಇಂಡಿಯಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement
web