ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ವತಿಯಿಂದ ನಿರ್ವಹಣೆಗೊಳ್ಳುತ್ತಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಪಾಲುದಾರಿಕೆ ಅಡಿಯಲ್ಲಿ ನಿರ್ವಹಣೆಗೆ ಕೇಂದ್ರ ಸರಕಾರ ಗುತ್ತಿಗೆಯನ್ನು ಅದಾನಿ ಗ್ರೂಪ್‌ ಪಡೆದುಕೊಂಡಿದ್ದರೂ, ಇಷ್ಟರ ತನಕ ಹಸ್ತಾಂತರ ನಡೆದಿಲ್ಲ.
ಕಳೆದ ತಿಂಗಳಿನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಸ್ತಾಂತರ ಪ್ರಕ್ರಿಯೆ ವೇಗ ಪಡೆದು, ಅದಾನಿ ಸಂಸ್ಥೆಯ ಅಧಿಕಾರಿಗಳು ವಿಮಾನ ನಿಲ್ದಾಣದ ಪರಿಶೀಲನೆ ನಡೆಸಿದ್ದರು. ಈಗ ವಿಮಾನ ನಿಲ್ದಾಣ ಅದಾನಿ ಕೈ ಸೇರುವ ದಿನ ಬಂದಿದೆ.

Advertisement


ಮಂಗಳೂರು ವಿಮಾನ ನಿಲ್ದಾಣವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಇದೆ ಅಕ್ಟೋಬರ್ ತಿಂಗಳ 31 ಕ್ಕೆ ಅದಾನಿ ಸಂಸ್ಥೆಗೆ ಹಸ್ತಾಂತರಿಸುತ್ತಿದೆ,50 ವರ್ಷಗಳ ಒಪ್ಪಂದ ಇದಾಗಿದ್ದು, ವಿಮಾನ ನಿಲ್ದಾಣಗಳ ನಿರ್ವಹಣೆ, ಟರ್ಮಿನಲ್‌ಗಳ ಅಭಿವೃದ್ಧಿ, ಗ್ರಾಹಕ ಸ್ನೇಹಿ ಯೋಜನೆಗಳು ಮೊದಲಾದ ಜವಾಬ್ದಾರಿಗಳನ್ನು ಖಾಸಗಿ ಕಂಪನಿ ನಿರ್ವಹಿಸಬೇಕಿದೆ. ಆದರೆ ತಾಂತ್ರಿಕ ನಿರ್ವಹಣೆಯನ್ನು ಮಾತ್ರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೇ ನಿರ್ವಹಿಸಲಿದೆ.
ಈ ಮಧ್ಯೆ, ಅದಾನಿ ಕಂಪನಿಯು ಒಳ ಒಪ್ಪಂದ ಮಾದರಿಯಲ್ಲಿ ಬೇರೆ ಕಂಪನಿ ಮೂಲಕ ಕಾರ್ಯಾಚರಣೆ, ನಿರ್ವಹಣೆಗೆ ಬಿಡ್‌ ಕರೆದಿದ್ದು, ಅದರಂತೆ ಜರ್ಮನ್‌ ಕಂಪನಿ ಅವರಿಂದ ಗುತ್ತಿಗೆ ಪಡೆದಿದೆ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಅಹಮದಾಬಾದ್ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನವೆಂಬರ್ 7 ರಂದು ಹಾಗು ಲಕ್ನೋ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನವೆಂಬರ್ 2 ರಂದು ಅದಾನಿ ಸಂಸ್ಥೆಗೆ ಹಸ್ತಾಂತರವಾಗಲಿದೆ

* ಮಂಗಳೂರು ವಿಮಾನ ನಿಲ್ದಾಣ ಆರಂಭ-1951
* ಕರ್ನಾಟಕದ 2ನೇ ದೊಡ್ಡ ವಿಮಾನ ನಿಲ್ದಾಣ
* ಅಂತಾರಾಷ್ಟ್ರೀಯ ವಿಮಾನ ಆರಂಭ-2006
* ಹೊಸ ವಿಮಾನ ನಿಲ್ದಾಣ ಉದ್ಘಾಟನೆ-2010
* ಪಿಪಿಪಿ ಮಾದರಿಗೆ ಟೆಂಡರ್‌ -2018 ಡಿಸೆಂಬರ್‌
* ಕೇಂದ್ರ ಸರಕಾರದ ಅನುಮೋದನೆ -2019 ಜುಲೈ
* ಅದಾನಿ ಗ್ರೂಪ್‌ ಜತೆ ಒಪ್ಪಂದ-2020 ಫೆಬ್ರವರಿ

Advertisement
web