ಮಂಗಳೂರು: ಸುಮಾರು 69 ವರ್ಷಗಳಿಂದ ಸರಕಾರಿ ಒಡೆತನದಲ್ಲಿದ್ದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಮಹತ್ವದ ಯೋಜನೆಯು ಇನ್ನೂ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಲಿದೆ. ಈ ವಿಮಾನ ನಿಲ್ದಾಣವು ಗೌತಮ್ ಅದಾನಿ ಅವರ ಅದಾನಿ ಸಮೂಹ ಸಂಸ್ಥೆಗೆ ಅಧಿಕೃತವಾಗಿ ಹಸ್ತಾಂತರಿಸಲಾಗುತ್ತದೆ ಎಂದು ಮಾಹಿತಿ ದೊರಕಿದೆ.ಖಾಸಗೀಕರಣವಾದ ಬಳಿಕ ವಿಮಾನ ನಿಲ್ದಾಣದ ಸಂಪೂರ್ಣ ಜವಾಬ್ದಾರಿಯನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲಾಗುವುದು. ನವೆಂಬರ್ 1 ರಿಂದ ಖಾಸಗೀ ಒಡೆತನಕ್ಕೆ ಅದಾನಿ ಸಂಸ್ಥೆಗೆ ಹಸ್ತಾಂತರಗೊಂಡರು ಸಹ ಮುಂದಿನ ಕೆಲ ವರ್ಷದವರೆಗೂ ಮಂಗಳೂರು ವಿಮಾನ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆಯು ಸಮಾನಾಗಿ ಕಾರ್ಯನಿರ್ವಹಿಸಲಿದೆ.

Advertisement

ಅದಾನಿ ಸಂಸ್ಥೆಯು ಮಂಗಳೂರು ವಿಮಾನ ನಿಲ್ದಾಣದ ಹಣ ವಿನಿಯೋಗ, ವಾಣಿಜ್ಯ ಚಟುವಟಿಕೆಗಳನ್ನು ಹಾಗೂ ಲಾಭ ನಷ್ಟಗಳನ್ನು ಎಲ್ಲಾ ನೋಡಿಕೊಳ್ಳುವ ಜವಾಬ್ದಾರಿವಹಿಸಲಿದೆ.

 

Advertisement
web