ಉಡುಪಿ,ಜೂ.9:ಕರಾವಳಿ ಯೂತ್ ಕ್ಲಬ್ ಉಡುಪಿ,ಭಗವತಿ ತಂಡ ಪಡುಬಿದ್ರಿ,ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲುಮುಟ್ಟು ಇವರ ವತಿಯಿಂದ ಜೂನ್ 8ರಂದು ಕಾರ್ಕಳ ತಾಲೂಕಿನ ದುರ್ಗಾ ಹೈಸ್ಕೂಲ್ ಜೋಡುರಸ್ತೆಯಲ್ಲಿ ವಿಜೇತ ವಿಶೇಷ ಶಾಲೆಯ ಸ್ಥಳಾಂತರಗೊಂಡ ಕಟ್ಟಡದ ಶ್ರಮಾದಾನ ಕಾರ್ಯಕ್ರಮ ನಡೆಯಿತು.ಲಾಕ್‍ಡೌನ್ ಮುಗಿದು ಕೆಲವು ತಿಂಗಳುಗಳಲ್ಲಿ ಶಾಲೆಯು ಆರಂಭವಾಗುವ ಮುಂಚಿತವಾಗಿ ಅದರ ಕಟ್ಟಡದ ದುರಸ್ತಿ ಕಾರ್ಯವನ್ನು ಶ್ರಮದಾನದ ಮೂಲಕವಾಗಿ ಕ್ಲಬ್‍ನ ಸದಸ್ಯರು ಮಾಡಿದರು.

Advertisement
Advertisement

3 ಕ್ಲಬ್‍ಗಳ ಸುಮಾರು 35 ಮಂದಿ ದಿನಪೂರ್ತಿ ಈ ಕೆಲಸದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪಾಲ್ಗೊಂಡರು.

ವಿಜೇತ ವಿಶೇಷ ಶಾಲೆ ಕಾರ್ಕಳ:
“ವಿಶೇಷ ಚೇತನ”ಮಕ್ಕಳಿಗಾಗಿ ಡಾ.ಕಾಂತಿ ಹರೀಶ್ ಎಂಬವರು ತನ್ನಲ್ಲಿದ್ದ ಜಾಗ,ಚಿನ್ನ ಅಡವಿರಿಸಿ ಆರಂಭಿಸಿದ ವಿಜೇತ ವಿಶೇಷ ಶಾಲೆಯು ಲಾಕ್‍ಡೌನ್ ಸಂದರ್ಭದಲ್ಲೂ ಪುನ: 7 ಅನಾಥ ವಿಶೇಷ ಚೇತನ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು ,ಊರ ಪರವೂರ ದಾನಿಗಳ,ಸ್ಥಳೀಯ ಸಂಘಸಂಸ್ಥೆಗಳ ನೆರವಿನಿಂದ ನಡೆಯುತ್ತಾ, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದೆ.ಸುಮಾರು 45 ಮಕ್ಕಳನ್ನು ಹೊಂದಿದ ಈ ಶಾಲೆಯು 25 ವರ್ಷಕ್ಕಿಂತ ಮೇಲಿನ ಮಕ್ಕಳಿಗೆ 17 ಸಿಬ್ಬಂದಿಗಳ ಮೂಲಕ ಅವರ ಪ್ರತಿಭೆ, ಕೌಶಲ್ಯವನ್ನು ಉದ್ದೀಪನಗೊಳಿಸುವಂತಹಾ ಅತ್ಯುತ್ತಮ ಕೆಲಸವನ್ನು ಈ ಶಾಲೆಯು ಮಾಡುತ್ತಿದೆ.ಇದರ ರೂವಾರಿ ಹಾಗೂ ಸಂಸ್ಥಾಪಕಿ ಡಾ.ಕಾಂತಿ ಹರೀಶ್.
ಶಾಲೆಗೆ ನಿರಂತರವಾಗಿ ಸಹಕಾರ ನೀಡುತ್ತಿರುವ ಎಲ್ಲಾ ಸಂಘಸಂಸ್ಥೆಗಳಿಗೆ ಹಾಗೂ ಊರಿನ ಹಾಗೂ ಪರವೂರಿನ ದಾನಿಗಳಿಗೆ ದನ್ಯವಾದವನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ವಿಶೇಷ ಶಾಲೆಯು ಆರಂಭವಾಗಲು ಕಾರಣವನ್ನು ಕೂಡಾ ವಿವರಿಸಿದರು.ಕೆಲವು ವರ್ಷಗಳ ಹಿಂದೆ ಒಂದು ಸಂಸ್ಥೆಯಲ್ಲಿ ಕಲಿಯುತ್ತಿದ್ದ 25 ವರ್ಷದ ಮೇಲಿನ ಮಕ್ಕಳಿಗೆ ಸರಕಾರದಿಂದ ಲಭಿಸುತ್ತಿದ್ದ ಅನುದಾನ ನಿಂತುಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಬೇಕಾದ ಪರಿಸ್ಥಿತಿ ಬಂತು.ಆಗ ಅಲ್ಲಿ ದುಡಿಯುತ್ತಿದ್ದ ಕಾಂತಿ ಹರೀಶ್ ಅವರಲ್ಲಿ “ಶಿವಾನಂದ”ಎನ್ನುವ ವಿದ್ಯಾರ್ಥಿ ತನಗಿನ್ನೂ ಕಲಿಯುವ ಹಂಬಲವಿದೆ ಎಂಬಂತೆ ಅಳಲು ತೋಡಿ “ಕಣ್ಣೀರು” ಹಾಕಿದ್ದನು.ಇದರಿಂದ 25 ವರ್ಷದ ಮೇಲಿನವರೂ,ವಿಕಲ ಚೇತನರೂ ಶಿಕ್ಷಣದಿಂದ ವಂಚಿತರಾಗಬಾರು,ಅವರಿಗೂ ಶಿಕ್ಷಣ ಪಡೆಯುವ ಹಕ್ಕಿದೆ ಎಂದು ಸ್ವಂತವಾಗಿ ತಾವೇ ಮುಂದೆಬಂದು ತಮ್ಮಲ್ಲಿದ್ದ ಒಡವೆಗೆಳು ಹಾಗೂ ಮನೆಯ ಜಾಗ ಅಡವಿರಿಸಿ ವಿಜೇತ ವಿಶೇಷ ಶಾಲೆಯನ್ನು ಆರಂಭಿಸಿದರು.ನಂತರದ ದಿನಗಳಲ್ಲಿ ಸಮಾಜದ ಒಳ್ಳೆಯ ಮನ್ಸುಗಳ ಸಹಕಾರ,ದಾನಿಗಳ ಬೆಂಬಲ ದೊರೆತಿದ್ದರಿಂದ ಸಂಸ್ಥೆಯು ಮುನ್ನಡೆಯಿತು.ಇಲ್ಲಿ ಸ್ಕಿಲ್ ಡೆವಲಪ್‍ಮೆಂಟ್,ಕರಕುಶಲ ತರಬೆತಿ,ಕ್ರೀಡೆ,ಸಾಂಕೃತಿಕ ಚಟುವಟಿಕೆಗಳು,ವೃತ್ತಿ ಶಿಕ್ಷಣ ಎಂಬಿತ್ಯಾದಿ ಹತ್ತು ಹಲವು ತರಗತಿಗಳನ್ನು ನಡೆಸಲಾಗುತ್ತಿದೆ.ಇಲ್ಲಿನ “ವಿಶೇಷ ಚೇತನ”ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಸಾಧನೆ ಮೆರೆದಿದ್ದಾರೆ.

ಈಗ ಲಾಕ್‍ಡೌನ್ ಸಂದರ್ಭ ಆರ್ಥಿಕ ಸಹಾಯ ಹೊಂದಿಸುವುದು ತೀವ್ರ ಕಷ್ಟವಾಗುತ್ತಿದೆ ಎಂದು ಅವರು ತಿಳಿಸಿದರು.ಸಂಸ್ಥೆಯನ್ನು ನಡೆಸಲು ಸ್ವಂತ ಜಾಗದ ಆವಶ್ಯಕತೆಯೂ ಇದ್ದು,ಶಾಲಾ ನಿರ್ವಹಣೆಗೆ ಕನಿಷ್ಠ ತಿಂಗಳಿಗೆ 2.5 ಲಕ್ಷ ಅನಿವಾರ್ಯತೆಯಿದ್ದು ದಾನಿಗಳು ಇಂತಹಾ ಸಮಾಜಮುಖೀ ಕಾರ್ಯಗಳಿಗೆ ಬೆಂಬಲವನ್ನು ನೀಡಬೇಕಾಗಿದೆ.ಜನರು ತಮ್ಮ ಮದುವೆ ವಾರ್ಷಿಕೋತ್ಸವ,ಜನ್ಮದಿನಾಚರಣೆಯಂತಹ ವಿಶೇಷವಾದ ದಿನಗಳನ್ನು ಆಚರಿಸುವ ಮೂಲಕವೂ ಪ್ರೋತ್ಸಾಹಿಸಬಹುದು.ಆದರೆ ದಾನಿಗಳ ನೆರವಿನಿಂದಲೇ 75 ವಿಶೇಷ ಮಕ್ಕಳನ್ನು ಪೋಷಿಸುತ್ತಿರುವ ವಿಜೇತ ವಿಶೇಷ ಶಾಲೆಗೆ ಲಾಕ್ ಡೌನ್ ನಿಂದಾಗಿ 3 ತಿಂಗಳಿನಿಂದೀಚೆಗೆ ದಾನಿಗಳ ಸಹಕಾರವಿಲ್ಲದೆ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.

ಸರಕಾರದಿಂದ ಈ ವರೆಗೆ ಯಾವುದೇ ಅನುದಾನ ಲಭಿಸದಿದ್ದರೂ ಕೂಡ ದೇಣಿಗೆ ಸಂಗ್ರಹಿಸಿ, 19 ಮಂದಿ ಸಿಬ್ಬಂದಿಗಳಿಗೆ ವೇತನ, ಹಾಸ್ಟೆಲ್ ಹಾಗೂ ಶಾಲಾ ಕಟ್ಟಡದ ಬಾಡಿಗೆ, ಶಾಲಾ ವಾಹನ ಸಾಲದ ಕಂತು, ವಿಶೇಷ ಮಕ್ಕಳಿಗೆ ವಸತಿನಿಲಯದ ವ್ಯವಸ್ಥೆ,ಮಕ್ಕಳಿಗೆ ಅವಶ್ಯಕವಿರುವ ತರಬೇತಿಯನ್ನು 4 ವರ್ಷಗಳಿಂದ ಯಶಸ್ವಿಯಾಗಿ ನೀಡುತ್ತಾ ಬಂದಿರುತ್ತಾರೆ. ಆದರೆ ವಿಶೇಷ ಮಕ್ಕಳನ್ನು ಪೋಷಿಸುತ್ತಿರುವ ಈ ತಾಯಿ ಲಾಕ್ ಡೌನ್ ನಿಂದಾಗಿ ಆತಂಕಕ್ಕೊಳಗಾಗಿದ್ದಾರೆ.

ವಿಶೇಷ ಮಕ್ಕಳ ಲಾಲನೆ ಪಾಲನೆಯೇ ತನ್ನ ಕರ್ತವ್ಯವೆಂದು ಅರಿತು ತನ್ನ ಜೀವನವನ್ನೇವಿಕಲಚೇತನ ಮಕ್ಕಳಿಗಾಗಿ ಮೀಸಲಾಗಿಟ್ಟ ಡಾ.ಕಾಂತಿ ಹರೀಶ್ ಎಂಬ ದಿಟ್ಟ ಮಹಿಳೆಯ ಸಂಕಷ್ಟದ ಕಥೆ ಇದು.
ಕೊರೋನಾ ಮಹಾಮಾರಿ ಎಲ್ಲರ ಕನಸು ಕಮರಿಸಿದಂತೆ, ವಿಜೇತ ಶಾಲೆಯ ಮಕ್ಕಳ ಕನಸುಗಳಿಗೂ ಕೊಳ್ಳಿ ಇಟ್ಟಿದೆ ಎಂದರೆ ತಪ್ಪಾಗಲಾರದು.

Advertisement

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಶಾಲಾ ನಿಯಮದ ಪ್ರಕಾರ ಶಾಲೆಯ ವಾರ್ಷಿಕ ರಜಾ ಸಮಯದಲ್ಲಿಯೂ ಇಲ್ಲಿರುವ ಸಿಬ್ಬಂದಿಯವರಿಗೆ ವೇತನವನ್ನು ನೀಡಬೇಕಾಗುತ್ತದೆ..ದಾನಿಗಳ ನೆರವಿನಿಂದಲೇ ನಡೆಯುತ್ತಿದ್ದ ಶಾಲೆಯೂ ಇದೀಗ ಸಿಬ್ಬಂದಿಗಳಿಗೆ ವೇತನ, ಕಟ್ಟಡ ಬಾಡಿಗೆ, ಹಾಸ್ಟೆಲ್ ನಲ್ಲಿರುವ ಅನಾಥ ವಿಶೇಷ ಮಕ್ಕಳ ಪಾಲನೆ ಇವೆಲ್ಲವುಗಳ ನಿರ್ವಹಣೆಗೆ ದೇಣಿಗೆ ಸಂಗ್ರಹವಿಲ್ಲದೆ ಕಂಗಾಲಾಗಿದೆ. ಕೊರೋನದ ಈ ಸಂದರ್ಭದಲ್ಲಿ ಶಾಲೆ ಮುಚ್ಚಿದ್ದರೂ ಬಹುತೇಕ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.

ಆದರೆ ಡಾ.ಕಾಂತಿ ಹರೀಶ್ ರವರು ಕೇವಲ ವಿಕಲಚೇತನ ಮಕ್ಕಳು ಮಾತ್ರವಲ್ಲದೇ ಅನಾಥ ವಿಶೇಷ ಮಕ್ಕಳನ್ನೂ ಒಟ್ಟಿಗೆ ಪೋಷಿಸಿಕೊಂಡು ಬಂದಿದ್ದಾರೆ. ಈಗ ಅನಾಥ ವಿಶೇಷ ಮಕ್ಕಳು ತನ್ನೊಂದಿಗೆ ಇದ್ದು ಅವರನ್ನು ಸಲಹುವುದು ಕೂಡ ಅವರ ಜವಾಬ್ದಾರಿಯಾಗಿರುತ್ತದೆ.

ನೆರವಿನ ನಿರೀಕ್ಷೆಯಲ್ಲಿದೆ “ವಿಜೇತ ವಿಶೇಷ” ಶಾಲೆ:

ಇದುವರೆಗೂ ಸಹೃದಯಿ ದಾನಿಗಳ ನೆರವಿನಿಂದಲೇ ನಡೆದುಕೊಂಡು ಬರುತ್ತಿದ್ದ ಶಾಲೆಗೆ ಇದೀಗ ಕೊರೊನಾದಿಂದಾಗಿ ದಾನಿಗಳ ಸಹಕಾರ ನಿಂತು ಹೋಗಿದ್ದು,ಸಂಸ್ಥಾಪಕಿ ಕಾಂತಿ ಹರೀಶ್ ರವರು ಕಂಗಾಲಾಗುವಂತೆ ಮಾಡಿದೆ. ಹುಟ್ಟುಹಬ್ಬ ಮದುವೆ ವಾರ್ಷಿಕೋತ್ಸವವನ್ನು ಆಚರಿಸುವವರು ಶಾಲೆಯಲ್ಲಿ ಆಚರಿಸುತ್ತಿದ್ದು ಇದೀಗ ಅದೂ ನಿಂತಿದೆ. ಇದರಿಂದಾಗಿ ಶಾಲೆಯ ನಿರ್ವಹಣೆಗೆ ಕಷ್ಟವಾಗಿದ್ದು, ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ ಕಾಂತಿ ಹರೀಶ್ ರವರು.

ಹಾಸ್ಟೆಲ್ ನಲ್ಲಿ ನಿಲ್ಲುವ ಮಕ್ಕಳಿಗೆ ಹಾಗೂ ದಿನ ನಿತ್ಯ ಶಾಲೆಗೆ ಬರುವ ಮಕ್ಕಳಿಗೆ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಾಣದ ಅವಶ್ಯಕತೆ ಅತಿ ತುರ್ತಾಗಿದೆ. ವಿದ್ಯಾರ್ಥಿಗಳಿಗೆ ಅತೀ ಅಗತ್ಯದ ಶೌಚಾಲಯ ನಿರ್ಮಾಣಕ್ಕೆ ಸದ್ಯದಲ್ಲಿಯೇ ಯೋಜನೆ ರೂಪಿಸಲಾಗಿದ್ದು ದಾನಿಗಳ ನೆರವು ಕೋರಲಾಗಿದೆ.

ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಕಾರ್ಕಳ ತಾಲೂಕಿನ ಪರಪುವಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜೇತ ವಿಶೇಷ ಶಾಲೆಗೆ ದಾನಿಗಳಿಂದ ಧನ ಸಹಾಯವನ್ನು ನೀಡಿ ಸಹಕರಿಸಬಯಸುವ ಹಸ್ತಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ನೀಡಬಹುದು.

ಸಂಪರ್ಕ ಸಂಖ್ಯೆ:9483017100,9449711678
Vijetha home Mentally Challenged
A.No- 520101233845530
IFSC.No – CORP0000148
MICR Code- 575017031
Corporation Bank
Karkala branch.

Shri Guru Raghavendra Seva Trust R.
A.No- 111101011003420
IFSC.No – VIJB0001111
MICR Code- 575029038
VIJAYA Bank
Karkala branch.

ಮಕ್ಕಳಿಂದ ವಿಶೇಷ ಪ್ರಾರ್ಥನೆ:

ಕರಾವಳಿ ಯೂತ್ ಕ್ಲಬ್ ,ಭಗವತಿ ತಂಡ ಪಡುಬಿದ್ರಿ, ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ಇದರ ಪದಾದಿಕಾರಿಗಳೆಲ್ಲರು ಸೇರಿಕೊಂಡು ಇಂದು ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿ ಒಂದು ದಿನವನ್ನು ಮಿಸಲಾಗಿಟ್ಟು ಶ್ರಮದಾನ ಮಾಡುವ ಕಾಯಕದಲ್ಲಿ ಕರಸೇವೆ ಮಾಡಿದ್ದಾರೆ. ತಮಗೆಲ್ಲರಿಗೂ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕೊಟ್ಟು ಕರುಣಿಸಲೆಂದು ವಿಜೇತ ವಿಶೇಷ ಶಾಲಾ ಮಕ್ಕಳು ಪ್ರಾರ್ಥನೆ ಸಲ್ಲಿಸಿದ್ದಾರೆ.

Advertisement
web