ಮಂಗಳೂರು,ಜೂ 9: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಜೂ.8 ರಂದು ಒಂದೇ ದಿನ ಒಟ್ಟು 5,01,778 ಕೆ.ಜಿ ಹಾಲು ಸಂಗ್ರಹಣೆ ಮಾಡುವುದರೊಂದಿಗೆ ದಾಖಲೆ ಬರೆದಿದೆ.ಇದುವರೆಗೆ ಪ್ರತಿದಿನ ಸರಾಸರಿ 4.7-4.8 ಲಕ್ಷ ಕೆ.ಜಿ ಹಾಲು ಸಂಗ್ರಹಣೆಯಾಗುತ್ತಿತ್ತು.ದಿನವೊಂದಕ್ಕೆ ಹಾಲಿನ ಪ್ರಮಾಣ 5 ಲಕ್ಷ ದಾಟಿದ್ದು ಇದೇ ಮೊದಲಾಗಿದೆ.ಸಾಮಾನ್ಯವಾಗಿ ವರ್ಷವೂ ಜೂನ್ ಜುಲಾಯಿ ತಿಂಗಳುಗಳಲ್ಲಿ ಇತರ ತಿಂಗಳುಗಳ ಹಾಲಿನ ಶೇಖರಣೆಯಿಂದ ಅಧಿಕ ಹಾಲು ಶೇಖರಣೆಯಾಗುತ್ತದೆ.2013-14 ಸಾಲಿನಲ್ಲಿ ದಿನವಹಿ ಸರಾಸರಿ 2.57 ಲಕ್ಷ ಕೆಜಿ ಹಾಲು ಒಕ್ಕೂಟದಲ್ಲಿ ಸಂಗ್ರಹಣೆಯಾಗುತ್ತಿತ್ತು.ಆದರೆ ಈಗ ಅದರ ಪ್ರಮಾಣ ದ್ವಿಗುಣಗೊಂಡಿದೆ.

Advertisement
ಹೈನುಗಾರರಿಂದ ಸಂಘಗಳಲ್ಲಿ ಹಾಲು ಸಂಗ್ರಹಣೆ

ಒಕ್ಕೂಟದಲ್ಲಿ ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು 726 ಹಾಲು ಉತ್ಪಾದಕ ಸಹಕಾರ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.ಸುಮಾರು 65,000 ಮಂದಿ ವಿವಿಧ ಹಾಲು ಉತ್ಪಾದಕ ಸಂಘಗಳ ಮೂಲಕ ಹಾಲುನ್ನು ಪೂರೈಸುತ್ತಿದ್ದಾರೆ.ಈ ದಾಖಲೆ ಹಾಲು ಸಂಗ್ರಹಣೆಗೆ ಕಾರಣಕರ್ತರಾದ ಉಭಯ ಜಿಲ್ಲೆಯ ಎಲ್ಲಾ ಹೈನುಗಾರರನ್ನು,ಹಾಲು ಉತ್ಪಾದಕ ಸಹಕಾರ ಸಂಘದ ಸಿಬಂದಿಗಳನ್ನು,ಒಕ್ಕೂಟದ ಅಧಿಕಾರಿಗಳನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ರವಿರಾಜ ಹೆಗ್ಡೆಯವರು ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಜಿ.ವಿ ಹೆಗ್ಡೆಯವರು ಅಭಿನಂದಿಸಿದ್ದಾರೆ.

ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಕೊಡವೂರು ರವಿರಾಜ ಹೆಗ್ಡೆ
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಜಿ.ವಿ ಹೆಗ್ಡೆ

ಲಾಕ್‍ಡೌನ್ ಸಂದರ್ಭದಲ್ಲೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದ ಸಂಘಗಳು ಕೋವಿಡ್-19 ವೈರಾಣು ಹರಡದಂತೆ ಸಾಕಷ್ಟು ಮುಂಜಾಗರೂಕತೆ ವಹಿಸಿ ಕಾರ್ಯನಿರ್ವಹಿಸಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು.ದಕ್ಷಿಣ ಕನ್ನಡ ಹಾಲು ಒಕ್ಕೂಟವು ರಾಜ್ಯದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಹಾಲನ್ನು ಸಂಗ್ರಹಿಸುವ ಮತ್ತು ಹಾಲು ಉತ್ಪಾದಕರಿಗೆ ಅತ್ಯಂತ ಹೆಚ್ಚಿನ ದರವನ್ನು ನೀಡುವ ಮೂಲಕ ಅಗ್ರಪಂಕ್ತಿಯಲ್ಲಿದೆ.

Advertisement
web