ಇನ್ನೇನೂ ಕೆಲವೇ ದಿನಗಳು ಬಾಕಿ ಇವೆ.ಅಮೆರಿಕಾದ ಗದ್ದುಗೆಯ ಗುದ್ದಾಟಕ್ಕೆ ತೆರೆ ಬೀಳುವುದಿದೆ. ಈಗಾಗಲೇ ಡೊನಾಲ್ಡ್  ಟ್ರಂಪ್ ವಿರುದ್ಧ ಜೋ ಬೈಡೆನ್ ತೊಡೆ ತಟ್ಟಿದ್ದು,ಅಧ್ಯಕ್ಷೀಯ ಚುನಾವಣಾ ಕಾವು ಅಮೆರಿಕಾ ಮಾತ್ರವಲ್ಲದೆ ಜಗತ್ತಿಗೂ ತಟ್ಟಿದೆ.

Advertisement

ಡೊನಾಲ್ಡ್ ಟ್ರಂಪ್ ಅವರ ವಿಜಯದ ಮಾನಸಿಕತೆಯೂ,ಜೋ ಬಿಡೆನ್ ಅವರ  ಛಲದ ವ್ಯಕ್ತಿತ್ವ ಗಳ ನಡುವೆ ನೇರ ಜಿದ್ದಾಜಿದ್ದಿ ಏರ್ಪಟ್ಟಿದ್ದು ಅಮೆರಿಕಾದ ಗದ್ದುಗೆ ಯಾರಿಗೆ ಸಿಗಲಿದೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ಈಗಾಗಲೇ ಬೈಡೆನ್ ಬರಾಕ್ ಒಬಾಮರ ಆಡಳಿತಾವಧಿಯಲ್ಲಿ ಅಮೆರಿಕಾದ ಉಪಾಧ್ಯಕ್ಷರಾಗಿದ್ದವರು.ಜೊತೆಗೆ ಅತ್ಯಂತ ಕಿರಿಯ ಸೆನೆಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದವರು.

ಜೋ ಬೈಡೆನ್ ತನ್ನ ಚುನಾವಣಾ ರಾಲಿಗಳಲ್ಲಿ ಅಭ್ಯರ್ಥಿಯ ಬಗೆಗೆ ತಿಳಿದು  ಮತ ಚಲಾವಣೆ ಮಾಡಿ ಎಂದು ಹೇಳುವಾಗ ಜೋ ಬೈಡೆನ್ ಕುರಿತು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.

ಡೊನಾಲ್ಡ್ ಟ್ರಂಪ್ ಬಗೆಗೆ ಹಲವು ವಿಷಯ ಗೊತ್ತೇ ಇದೆ.ಇವರು ಹುಟ್ಟುತ್ತಲೇ ಶ್ರೀಮಂತರು,ತಂದೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದವರು.ಮತ್ತು ಹೆಸರಾಂತ ಬಿಲ್ಡರ್ ಗಳಲ್ಲಿ ಒಬ್ಬರಾಗಿದ್ದರು.ನಂತರ ತನ್ನ ತಂದೆಯ ರಿಯಲ್ ಎಸ್ಟೇಟ್ ಉದ್ಯಮವನ್ನು  ಟ್ರಂಪ್ ಕೂಡ ಮುಂದುವರೆಸಿದರು.

ಆದರೆ ಜೋ ಬೈಡೆನ್ ಹಾಗಲ್ಲ.ತುಂಬಾ ಕೆಲಮಟ್ಟದಿಂದ ಉನ್ನತ ಮಟ್ಟಕ್ಕೆ ಬೆಳೆದವರು.ಮೊದಲಾಗಿ ಕಾನೂನು ಪದವಿ ಪಡೆದಿದ್ದ ಬೈಡೆನ್ ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಆಸಕ್ತಿಯನ್ನು ಹೆಚ್ಚಿಸಿಕೊಂಡರು.ಡೆಮಾಕ್ರಟಿಕ್ ಪಾರ್ಟಿಯನ್ನು ಸೇರಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು.1972ರಲ್ಲಿ ಅಮೆರಿಕಾದ ಅತ್ಯಂತ ಕಿರಿಯ ಸೆನೆಟರ್ ಎಂಬ ಕೀರ್ತಿಗೆ ಬೈಡೆನ್ ಭಾಜನರಾದರು.
ಇವರು ಸಂಭ್ರಮ ಪಡುವ ತಿಂಗಳೊಳಗಾಗಿ ಒಂದು ರಸ್ತೆ ಅಪಘಾತ  ಬೈಡೆನ್ ಅವರನ್ನು ಆಘಾತಕ್ಕೆ ನೂಕಿತ್ತು.ಈ ರಸ್ತೆ ಅಪಘಾತದಲ್ಲಿ ಬೈಡೆನ್ ಅವರ ಸುಂದರ ಸಂಸಾರದ ಕಣ್ಣುಗಳಂತಿದ್ದ ಹೆಂಡತಿ ಮತ್ತು ಸಣ್ಣ ಮಗಳನ್ನು ಕಳೆದುಕೊಂಡಿದ್ದರು.ಮತ್ತು ತನ್ನ ಇಬ್ಬರು ಗಂಡು ಮಕ್ಕಳಿಗೆ ಹೆಚ್ಚಿನ ಗಾಯವಾಗಿತ್ತು.ಇದರಿಂದ ಹೆಚ್ಚಾಗಿ ನೊಂದಿದ್ದ ಬೈಡೆನ್ ಆತ್ಮಹತ್ಯೆಗೂ ಯತ್ನಿಸಿದ್ದರಂತೆ.
ನಂತರ ಛಲ ಬಿಡದೆ ಬೈಡೆನ್ ತನ್ನ ಇಬ್ಬರು ಗಂಡು ಮಕ್ಕಳಿಗೆಗಾಗಿ ಮತ್ತೆ ಬದುಕುವ ಛಲದೊಂದಿಗೆ ಮುನ್ನಡೆದಿದ್ದರು.

ಅಮೆರಿಕಾದ ಉಪಾಧ್ಯಕ್ಷರಾಗಿದ್ದಾಗ ಮತ್ತೊಂದು ಆಘಾತ ಬೈಡೆನ್ ಅವರಿಗೆ ಎದುರಾಗಿತ್ತು. ಇವರ ಪ್ರೀತಿಯ ಪುತ್ರ ಬೊ ಬೈಡೆನ್  ಬ್ರೈನ್ ಕ್ಯಾನ್ಸರ್ ತುತ್ತಾಗಿ ಸಾವನ್ನಪ್ಪಿದರು.ಇಷ್ಟೆಲ್ಲ ಆಘಾತಗಳ ನಡುವೆಯೂ ಅದನ್ನೆಲ್ಲ ಮೆಟ್ಟಿ ನಿಂತರು ಬೈಡೆನ್. ಬೈಡೆನ್ ಅವರೇ ಹೇಳುವಂತೆ “faith sees best in the dark”.

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ” ತೋರಿಕೆ ಇಲ್ಲದ ಪ್ರೀತಿ ,ಸ್ವಾರ್ಥ ಇಲ್ಲದ ಸೇವೆ,ಮತ್ತು ಜೀವನವನ್ನು ಸಂಪೂರ್ಣವಾಗಿ ಜೀವಿಸಿದವರಲ್ಲಿ ಜೋ ಬಿಡೆನ್ ಒಬ್ಬರು ಎಂದು” ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶೂನ್ಯದಿಂದ ಹಿಡಿದು, ಇಂದು ಅಮೆರಿಕಾದಂತಹ ಪ್ರಬಲ ದೇಶದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವ ಮಟ್ಟಕ್ಕೆ ಜೋ ಬೈಡೆನ್ ಬೆಳೆದು ನಿಂತಿದ್ದಾರೆ ಎಂದರೆ ನಿಜವಾಗಲೂ ಗ್ರೇಟ್ ಅಲ್ವಾ ?…

Advertisement
web