ಕಡಬ: ತಾಲೂಕಿನ ೨ ನೇ ಸಾಹಿತ್ಯ ಸಮ್ಮೇಳನವು ಫೆ.24 ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಲಿದೆ.

Advertisement

ಈ ಸಮ್ಮೇಳನಕ್ಕೆ ತಾಲೂಕಿನ ನೂಜಿಬಾಳ್ತಿಲದ ಯುವಸಾಹಿತಿಯಾಗಿರುವ ಸಮ್ಯಕ್ತ್ ಜೈನ್ ಅವರು ಆಯ್ಕೆಯಾಗಿರುತ್ತಾರೆ.ಇವರು ಪ್ರಸ್ತುತ ನೆಲ್ಯಾಡಿಯ ಸಾಪಫಿಯೆನ್ಶಿಯಾ ಬೆಥನಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯಿದ್ದು,ಈಗಾಗಲೇ ಹಲವಾರು ರಾಜ್ಯ ,ಜಿಲ್ಲಾ ಕವಿಗೋಷ್ಟಿಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಇವರು ಬರೆದ ಮೂರು ಕೃತಿಗಳೂ ಈಗಾಗಲೇ ಬಿಡುಗಡೆಯಾಗಿದ್ದು, ಹಲವಾರು ಪ್ರಶಂಸೆಗಳಿಗೆ ಪಾತ್ರರಾಗಿದ್ದಾರೆ‌ಇವರು ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಮಂಜುಳಾ ದಂಪತಿಯ ಪುತ್ರ.

Advertisement
web