ಉಡುಪಿ- ಜೂನ್ 9 ರಂದು ಕಾಣೆಯಾಗಿದ್ದ ವ್ಯಕ್ತಿ, ಶವವಾಗಿ ಪತ್ತೆ.
ಉಡುಪಿ‌ ಜಿಲ್ಲೆಯ ಕನ್ನರ್ಪಾಡಿಯಲ್ಲಿ ಜೂನ್ 9 ರಂದು ಕಾಣೆಯಾಗಿದ್ದ
ರಘುನಾಥ್ (೫೫) ಅವರ ಶವ ಜೂನ್ 10ರಂದು ಬಾವಿಯಲ್ಲಿ ಪತ್ತೆಯಾಗಿದೆ.

Advertisement

ಟೈಲರಿಂಗ್ ಅಂಗಡಿಯಲ್ಲಿ ಕೋಟ್ ಗಳನ್ನು ಹೊಲಿಯುತ್ತಿದ್ದ ಮೃತ ವ್ಯಕ್ತಿ
ಆರ್ಥಿಕ ಸಂಕಷ್ಟದಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಸರಕಾರ ಇಲ್ಕಿಯವರೆಗೆ ಅನೇಕ ಕಾರ್ಮಿಕ ವರ್ಗದ ಜನರಿಗೆ ಆರ್ಥಿಕ ಸಹಾಯ ಘೋಷಣೆ ಮಾಡಿದ್ದಾರೆ. ಆದರೆ ಟೈಲರ್ಸ್ ಗಳಿಗೆ ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಿಲ್ಲ. ಮುಂದಿನ ದಿನಗಳಲ್ಲಿ ಸಂಕಷ್ಟಗಳು ಎದುರಾಗುವ ಸಾಧ್ಯತೆಗಳು ಇರುವುದರಿಂದ ಸರಕಾರ ಟೈಲರ್ಸ್ ಗಳಿಗೆ ಸಹಾಯಹಸ್ತವನ್ನು ಚಾಚಬೇಕು ಎಂದು ಕರ್ನಾಟಕ ರಾಜ್ಯ ಟೈಲರ್ಸ್ ಸಂಘ ಆಗ್ರಹ ಮಾಡಿದೆ”
ಬಿ ವಸಂತ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್

Advertisement
web